• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಅಪಾಯಕಾರಿ ಬಹುಮುಖಿ ವರ್ತನೆ. . .

ನಾವು ಎಲ್ಲ ಸಂದರ್ಭಗಳಿಗೂ ಒಂದೇ ರೀತಿಯ ಪ್ರತಿಕ್ರಿಯೆ ವ್ಯಕ್ತಪಡಿಸುವುದಿಲ್ಲ. ಆಯಾ ಸನ್ನಿವೇಶದ ತೀವ್ರತೆಗೆ ತಕ್ಕಂತೆ ಸ್ಪಂದನೆ ಇರುತ್ತದೆ. ಇದು ಸಹಜ. ಹೀಗೆ ಮಾಡಿದಾಗ ನಮ್ಮ ಮೂಲ ವ್ಯಕ್ತಿತ್ವದಲ್ಲಿ ಬದಲಾವಣೆಗಳಾಗಿರುವುದಿಲ್ಲ. ಆದರೆ ಬಹುಮುಖಿ ವ್ಯಕ್ತಿತ್ವದ ಇದಕ್ಕೆ ತದ್ವಿರುದ್ಧ. ರೀತಿ ವರ್ತಿಸುವವರ ಮೂಲ ವ್ಯಕ್ತಿತ್ವದಲ್ಲಿಯೆ ಬದಲಾವಣೆಗಾಗಿರುತ್ತದೆ. ಮೂಲ ವ್ಯಕ್ತಿತ್ವ ಯಾವುದು ಎಂಬುದು ಗುರುತಿಸದಂಥ ಸ್ವಭಾವ ಅವರಲ್ಲಿ ಅಂರ್ತಗತವಾಗಿರುತ್ತದೆ. ಇದು ಮಾನಸಿಕ ಅನಾರೋಗ್ಯದ ಲಕ್ಷಣ.

ಸ್ವತಃ ಅರಿವಿರುವುದಿಲ್ಲ
ಇಂಥ ಬಹುಮುಖಿ ವ್ಯಕ್ತಿತ್ವ ಹೊಂದಿದವರಿಗೆ ತಾವು ಬೇರೆ ಬೇರೆ ಸಂದರ್ಭಗಳಲ್ಲಿ ವಿಭಿನ್ನವಾಗಿ ವರ್ತಿಸಿದ್ದೇವೆ ಎಂಬ ಅರಿವೂ ಇರುವುದಿಲ್ಲ. ಇವರ ವರ್ತನೆಯನ್ನು ಕಂಡವರು ಅದನ್ನು ಹೇಳಿದರೂ ಅವರು ನಂಬುವುದಿಲ್ಲ. ಅಷ್ಟರ ಮಟ್ಟಿಗೆ ಅವರಲ್ಲಿ ಬದಲಾವಣೆಗಳು ಆಗುತ್ತವೆ. ಇಂಥ ವರ್ತನೆಯನ್ನು ಮನಶಾಸ್ತ್ರೀಯ ಪರಿಭಾಷೆಯಲ್ಲಿ ಬಹುಮುಖಿ( ಮಲ್ಟಿಪಲ್ ಪರ್ಸನಾಟಿಲಿ ಡಿಸಾರ್ಡರ್) ಎನ್ನುತ್ತಾರೆ.

ಉದ್ದೇಶಪೂರ್ವಕವಲ್ಲ:
ಇಂಥ ವರ್ತನೆ ಉದ್ದೇಶಪೂರ್ವಕವಲ್ಲ. ಇದೊಂದು ಮಾನಸಿಕ ಅನಾರೋಗ್ಯದ ಒಂದು ಸ್ಥಿತಿ. ತೀವ್ರವಾದ-ಭರಿಸಲಾಗದ  ಮಾನಸಿಕ ಹತಾಶೆ ಸ್ಥಿತಿಗಳನ್ನು ನಿವಾರಿಸಿಕೊಳ್ಳಲು ಶಕ್ತನಾಗದ ವ್ಯಕ್ತಿ ಇಂಥ ಸ್ಥಿತಿಗೆ ಒಳಗಾಗುವ ಸಾಧ್ಯತೆಗಳಿವೆ. ಹಂತದಲ್ಲಿ ವ್ಯಕ್ತಿ ತನ್ನ ಅಭಿವ್ಯಕ್ತಿ ಮೇಲಿನ ಹತೋಟಿ ಕಳೆದುಕೊಳ್ಳುತ್ತಾನೆ. ಇದನ್ನು ನೋಡಿದ ಬಂಧುಗಳು, ಸ್ನೇಹಿತರು ವ್ಯಕ್ತಿ ಯಾಕೆ ಹೀಗೆ ಆಡುತ್ತಿದ್ದಾರೆ. ಹುಚ್ಚು ಹಿಡಿದಿದೆಯ ಎಂದುಕೊಳ್ಳುತ್ತಾರೆ. ಇಂಥ ಸ್ಥಿತಿಯನ್ನು ಹುಚ್ಚು ಎಂದು ಪರಿಗಣಿಸಲು ಸಾಧ್ಯವಿಲ್ಲ.

ರಕ್ಷಣಾ ತಂತ್ರ:
ರೋಗಕಾರಕ ವೈರಸ್ ಅಥವಾ ಬ್ಯಾಕ್ಟೀರಿಯಾಗಳನ್ನು ತಡೆಗಟ್ಟಲು ದೇಹದಲ್ಲಿ ರೋಗ ನಿರೋಧಕ ವ್ಯವಸ್ಥೆ ಸದಾ ಕೆಲಸ ಮಾಡುತ್ತಿರುತ್ತದೆ. ಇದೇ ರೀತಿ ಮಿದುಳು ಕೂಡ ಸ್ವಯಂ ರಕ್ಷಣಾ ವ್ಯವಸ್ಥೆಯನ್ನು ಅಂತರ್ಗತ ಮಾಡಿಕೊಂಡಿರುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ವ್ಯಕ್ತಿ ವ್ಯಕ್ತಿರಿಕ್ತವಾಗಿ ವರ್ತಿಸುವುದು ಕೂಡ ಇಂಥ ಇಂಥ ಸ್ವಯಂ ರಕ್ಷಣಾ ತಂತ್ರದಿಂದಲೇ. ಮೊದಲೇ ಹೇಳಿದಂತೆ ವ್ಯಕ್ತಿಗೆ ಇದರ ಬಗ್ಗೆ ಅರಿವಿರುತ್ತದೆ. ಕಾಲಕ್ರಮೇಣ ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಹೊಂದಿಕೊಳ್ಳುವ ಅಥವಾ ಪರಿಸ್ಥಿತಿಯನ್ನು ಸರಿಮಾಡಿಕೊಳ್ಳುವ ಅಥವಾ ಆದ ಮಾನಸಿಕ ಆಘಾತ ಮರೆಯುವ ಹಂತಕ್ಕೆ ತಲುಪಲಾಗುತ್ತದೆ. ಆದರೆ ರೀತಿಯ ಅರ್ಥೈಸುವಿಕೆ-ವಿಶ್ಲೇಷಣೆ ಸಾಧ್ಯವಾಗದ ಹಂತಕ್ಕೆ ತಲುಪಿದಾಗ ಓರ್ವ ವ್ಯಕ್ತಿಯಲ್ಲಿಯೆ ಬೇರೆಬೇರೆ ವ್ಯಕ್ತಿತ್ವ ಕಾಣತೊಡಗುತ್ತದೆ.

ಮಹಿಳೆಯರೇ ಹೆಚ್ಚು:
ಬಹುಮುಖಿ ವ್ಯಕ್ತಿತ್ವ ಮತ್ತು ಅದರ ಅಪಾಯಗಳ ಕುರಿತು ಪಾಶ್ಚಾತ್ಯ ದೇಶಗಳಲ್ಲಿ ಸಾಕಷ್ಟು ಸಂಶೋಧನೆಗಳಾಗಿವೆ. ಅಮೆರಿಕಾದಲ್ಲಿ ನಡೆದ ಸಂಶೋಧನೆ ಪ್ರಕಾರ ಬಹುಮುಖಿ ವರ್ತನೆ ತೋರುವವರಲ್ಲಿ ಮಹಿಳೆಯರೇ ಹೆಚ್ಚು ಎಂಬುದು. ಬಾಲ್ಯಕಾಲದಲ್ಲಿ ಪುರುಷರಿಗಿಂತಲೂ ಮಹಿಳೆಯರು ಹೆಚ್ಚು ಮಾನಸಿಕ ಆಘಾತಗಳಿಗೆ ಒಳಗಾಗುವಂಥ ಘಟನೆಗಳು ನಡೆದಿರುವುದು. ಲೈಂಗಿಕ ಕಿರುಕುಳ-ಅತ್ಯಾಚಾರ-ದೈಹಿಕ ಮತ್ತು ಮಾನಸಿಕ ಹಿಂಸೆ. ಇಂಥ ದುರ್ಘಟನೆಗಳ ದುಷ್ಪರಿಣಾಮ ಅವರು ವಯಸ್ಕರಾದ ಮೇಲೂ ಉಳಿದಿದ್ದರೆ ಅದು ಅವರ ವ್ಯಕ್ತಿತ್ವದ ರಚನೆ ಮೇಲೂ ನಕಾರಾತ್ಮಕ ಪರಿಣಾಮ ಬೀರಬಹುದು. ಅತ್ಯಾಚಾರಕ್ಕೆ ಒಳಗಾದ ಬಾಲಕಿಯರು ತಮಗೆ ಉಂಟಾಗಿರುವ ತೀವ್ರ ಮಾನಸಿಕ-ದೈಹಿಕ ಆಘಾತದಿಂದ ಬೇರೊಂದು ರೀತಿಯ ವರ್ತನೆಯನ್ನು ಮೈಗೂಡಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ. ಇಂಥವರು ವಾಸ್ತವ ಜಗತ್ತಿಗೆ ಹೊಂದಿಕೊಳ್ಳಲಾಗದಂಥ ಸ್ಥಿತಿಗೂ ತಲುಪಬಹುದು. ವರ್ಷಗಳು ಉರುಳಿದಂತೆ ಇಂಥ ಸ್ವಭಾವವೂ ಬಲವಾಗುತ್ತಾ ಹೋಗುತ್ತದೆ.

ಪುರುಷರು:
ಬಾಲ್ಯ ಕಾಲದಲ್ಲಿ ಮಾನಸಿಕ-ದೈಹಿಕ ಆಘಾತ-ಸತತ ಹಿಂಸೆ ಲೈಂಗಿಕ ದೌರ್ಜನ್ಯಗಳಿಗೆ ಒಳಗಾದ ಬಾಲಕರು ಕೂಡ ಬೆಳೆದಂತೆಲ್ಲ ಬಹುಮುಖಿ ವರ್ತನೆಗೆ ಒಳಗಾಗುವ ಸಾಧ್ಯತೆಗಳು ಹೆಚ್ಚು. ಮಾನಸಿಕವಾದ ಆರೋಗ್ಯಕರ ವಾತಾವರಣದಲ್ಲಿ ಬೆಳೆದ ಮಕ್ಕಳಿಗೂ ಮತ್ತು ಅನಾರೋಗ್ಯಕರ ವಾತಾವರಣದಲ್ಲಿ ಬೆಳೆದ ಬಾಲಕರಿಗೂ ನಡುವೆ ವರ್ತನೆ ವಿಚಾರದಲ್ಲಿ ಸಾಕಷ್ಟು ವ್ಯತ್ಯಾಸಗಳನ್ನು ಕಾಣಬಹುದು. ಬೇರೆಬೇರೆ ಪರಿಸರ-ಸನ್ನಿವೇಶಗಳಿಗೆ ಸ್ಪಂದಿಸುವ ರೀತಿಯೂ ವಿಭಿನ್ನವಾಗಿರುತ್ತದೆ.

ಇತರೆ ಮಾನಸಿಕ ತೊಂದರೆಗಳು:
ಬಹುಮುಖಿ ವರ್ತನೆಯನ್ನು ಬಹುಬೇಗನೆ ಪತ್ತೆ ಹಚ್ಚಿ ಚಿಕಿತ್ಸೆ ನೀಡದಿದ್ದರೆ ಇಂಥ ವ್ಯಕ್ತಿತ್ವ ದೋಷಗಳಿಗೆ ಒಳಗಾದವರಲ್ಲಿ ಇತರೆ ಮಾನಸಿಕ ತೊಂದರೆಗಳು ಕಾಣಿಸಿಕೊಳ್ಳಬಹುದು. ತೀವ್ರವಾಗಿ ಸಿಟ್ಟಿಗೇಳುವುದು-ಇಂಥ ಸಂದರ್ಭದಲ್ಲಿ ಸುತ್ತಮುತ್ತ ಇರುವವರಿಗೆ ತೊಂದರೆ ಮಾಡುವುದು, ಖಿನ್ನತೆ ಇತ್ಯಾದಿ ಲಕ್ಷಣಗಳು ಕಾಣಿಸಿಕೊಂಡು ಇವು ಕೂಡ ಬಲವಾಗುತ್ತಾ ಹೋಗುತ್ತವೆ. ತಾವು ಹೇಳಿದ್ದನ್ನು ಅಥವಾ ಮಾಡಿದನ್ನು ಅವರು ನಿರಾಕರಿಸುತ್ತಾರೆ. ನಾನು ಹಾಗೆ ಮಾಡಿಲ್ಲ ಅಥವಾ ನಾನು ಹಾಗೆ ಹೇಳಿಯೇ ಇಲ್ಲ ಎಂದು ಪ್ರತಿಪಾದಿಸುತ್ತಾರೆ. ಇದಕ್ಕೆ ಕಾರಣ ಬಹುಮುಖಿ ವರ್ತನೆಯಿಂದಾಗಿ ತಾನು ಏನು ಹೇಳಿದೆ ಅಥವಾ ಮಾಡಿದೆ ಎಂಬುದರ ನೆನಪು ಅವರಿಗಿಲ್ಲದಿರುವುದೇ ಆಗಿರುತ್ತದೆ. ಇಂಥ ಮಾನಸಿಕ ಸ್ಥಿತಿಗೆ ಒಳಗಾದವರಿಗೆ ಅವರ ಬಾಲ್ಯಕಾಲದಲ್ಲಿ ನಡೆದ ಆಘಾತಗಳಿಂದ ಹೊರಬರುವಂಥ ಚಿಕಿತ್ಸೆಯನ್ನು ನೀಡಬೇಕಾಗುತ್ತದೆ. ಖಿನ್ನತೆ-ತೀವ್ರ ಸಿಟ್ಟು ಇತ್ಯಾದಿ ಲಕ್ಷಣಗಳಿಗೆ ಮಾತ್ರ ಮಾನಸಿಕ ಚಿಕಿತ್ಸೆ ನೀಡಿದರೆ ಅದರಿಂದ ಪ್ರಯೋಜನವಾಗುವುದಿಲ್ಲ.

ಸ್ಕಿಜೋಫ್ರೇನಿಯಾ ಹೋಲಿಕೆ:
ಬಹುಮುಖಿ ವರ್ತನೆ ದೋಷಕ್ಕೆ ಒಳಗಾದವರನ್ನು ಸ್ಕಿಜೋಫ್ರೇನಿಯಾ ಮಾನಸಿಕ ತೊಂದರೆಯವರೆಂದು ಗುರುತಿಸಿ ಅದರ ನಿವಾರಣಗೆ ಅಗತ್ಯವಾದ ಚಿಕಿತ್ಸೆ ನೀಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಇದಕ್ಕೆ ಕಾರಣ ಬಹುಮುಖಿ ವರ್ತನೆ ದೋಷ ಮತ್ತು ಸ್ಕಿಜೋಫ್ರೇನಿಯಾ ಸಮಸ್ಯೆಗೆ ಒಳಗಾದವರ ಕೆಲವು ಲಕ್ಷಣಗಳು ಮೇಲ್ನೋಟ್ಟಕ್ಕೆ ಒಂದೇ ರೀತಿ ಇರುವುದು. ಆದ್ದರಿಂದ ಮನೋವೈದ್ಯರು ಇಂಥ ವರ್ತನೆ ತೋರುವವರನ್ನು ದೀರ್ಘಕಾಲ ಗಮನಿಸಿ ಚಿಕಿತ್ಸೆ ನೀಡುತ್ತಾರೆ. ಇದರಿಂದಾಗಿ ಚಿಕಿತ್ಸೆಯ ಅವಧಿಯೂ ಧೀರ್ಘಾವಧಿಯದಾಗಿರುತ್ತದೆ. ಇವೆಲ್ಲ ಹಿನ್ನೆಲೆಯಲ್ಲಿ ಸಮಸ್ಯೆ ತಿಳಿಯುತ್ತಿದಂತೆ ಅಂಥ ವ್ಯಕ್ತಿಯನ್ನು ಮಾನಸಿಕ ಚಿಕಿತ್ಸಾ ತಜ್ಞರ ಬಳಿ ಕರೆದುಕೊಂಡು ಹೋಗಬೇಕು. ಇಂಥ ಸಂದರ್ಭದಲ್ಲಿ ವ್ಯಕ್ತಿ ತನಗೇನೂ ಸಮಸ್ಯೆ ಇಲ್ಲವೆಂದು ವಾದಿಸಬಹುದು. ಇದರಿಂದ ಸುಮ್ಮನಾಗದೇ ಅನುನಯದಿಂದ ಮನೋವೈದ್ಯರ ಬಳಿ ಪರೀಕ್ಷೆಗೆ ಒಳಪಡಿಸಬೇಕು. ಎಷ್ಟು ಬೇಗ ಚಿಕಿತ್ಸೆ ಪ್ರಾರಂಭವಾಗುತ್ತದೋ ಅಷ್ಟು ಉತ್ತಮ. ಕುಟುಂಬದ ಸದಸ್ಯರು ಇಂಥ ಸಂದರ್ಭದಲ್ಲಿ ತುಂಬ ತಾಳ್ಮೆಯಿಂದಿರುವುದು ಕೂಡ ಅತ್ಯಾವಶ್ಯಕ. ಇವರು ಧೃತಿಗೆಟ್ಟರೆ ಅಥವಾಹನೆ ಕಳೆದುಕೊಂಡರೆ ಅದು ಚಿಕಿತ್ಸೆ ಮೇಲೂ ದುಷ್ಪರಿಣಾಮ ಬೀರುತ್ತದೆ. ವೈದ್ಯರು ಬಹುಮುಖಿ ವರ್ತನೆ ವ್ಯಕ್ತಿಯೆಂದು ಗುರುತಿಸಿದವರ ಬಳಿ ವಾದ-ವಿವಾದ ಮಾಡುವುದು-ಸಿಟ್ಟಿಗೇಳುವುದನ್ನು ಮಾಡಬಾರದು.

3 comments:

 1. Mental well being is very necessary in these times of stressful living.This results in many other problems playing havoc on ones near and dear ones. People should not hesitate to visit a psychologist/psychiatrist. Nicely summed up write up. My daughter studies psychology and discusses such things with me. Even if it takes longer to heal, there is a cure/solution for most of mental disorders!!
  malathi S

  ReplyDelete
 2. ವಿಶ್ವದಲ್ಲಿ 450 ಮಿಲಿಯನ್ಗೂ ಮಿಗಿಲಾದ ಸಂಖ್ಯೆಯ ಜನರು ಮಾನಸಿಕ ಅನಾರೋಗ್ಯದಿಂದ ನರಳುತ್ತಲಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ 2020 ಇಸ್ವಿಯ ಹೊತ್ತಿಗೆ ಪ್ರಪಂಚದ ಎರಡನೆ ಅತಿ ದೊಡ್ಡ ರೋಗ ಎಂದರೆ ಖಿನ್ನತೆಯೆ ಆಗುವುದು (ಮುರ್ರೆ & ಲೊಪೆಜ್, 1996). ಪ್ರಪಂಚದಲ್ಲಿನ ಮಾನಸಿಕ ಆರೋಗ್ಯ ನಿರ್ವಹಣೆಯ ಸಾಮಾಜಿಕ ಮತ್ತು ಆರ್ಥಿಕ ಹೊರೆಯು ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಶೀಲ ರಾಷ್ಟ್ರಗಳು ಚಿಕಿತ್ಸೆ ನೀಡಲು ಶಕ್ತವಾಗದಷ್ಟು ಇದೆ. ಮಾನಸಿಕ ಆರೋಗ್ಯವನ್ನು ಉತ್ತೇಜಿಸಿ ಜತೆಗೆ ಮಾನಸಿಕ ಅನಾರೋಗ್ಯಕ್ಕೆ ಚಿಕಿತ್ಸೆ ನೀಡುವುದರ ಕಡೆ ಗಮನ ಹರಿಸಬೇಕಿದೆ. ಮಾನಸಿಕ ಆರೋಗ್ಯವು ವ್ಯಕ್ತಿಯ ವರ್ತನೆಯ ಜತೆ ಗಾಢ ಸಂಬಂಧ ಹೊಂದಿದೆ ಮತ್ತು ದೈಹಿಕ ಆರೋಗ್ಯ ಮತ್ತು ಜೀವನದ ಗುಣ ಮಟ್ಟಕ್ಕೆ ಮೂಲಕಾರಣ ವಾಗಿದೆ.
  ದೈಹಿಕ ಆರೋಗ್ಯವು ಮಾನಸಿಕ ಆರೋಗ್ಯದ ಜತೆ ಗಾಢ ಸಂಬಂಧ ಹೊಂದಿದೆ. ಮಾನಸಿಕ ಅವ್ಯವಸ್ಥೆಯು ವೈಯುಕ್ತಿಕ ಆರೋಗ್ಯಪೂರ್ಣ ವರ್ತನೆಗಳಾದ ಸೂಕ್ತ ಆಹಾರ ಸೇವನೆ, ಸಕ್ರಮ ವ್ಯಾಯಾಮ ,ಸಾಕಷ್ಟು ನಿದ್ರೆ, ಮಾನಸಿಕ ಅನಾರೋಗ್ಯವು ಸಾಮಾಜಿಕ ಸಮಸ್ಯೆಗಳಾದ ನಿರುದ್ಯೋಗ, ಒಡೆದ ಕುಟುಂಬ, ಬಡತನ, ಮಾದಕ ದ್ರವ್ಯಗಳ ಬಳಕೆ ಮತ್ತು ಸಂಬಂಧಿಸಿದ ಅಪರಾಧಗಳಿಗೆ ಕಾರಣವಾಗಬಹುದು
  ಆರೋಗ್ಯವನ್ನು ಉತ್ತೇಜಿಸಿ ಜತೆಗೆ ಮಾನಸಿಕ ಅನಾರೋಗ್ಯಕ್ಕೆ ಚಿಕಿತ್ಸೆ ನೀಡುವುದರ ಕಡೆ ಗಮನ ಹರಿಸಬೇಕಿದೆ. ಮಾನಸಿಕ ಆರೋಗ್ಯವು ವ್ಯಕ್ತಿಯ ವರ್ತನೆಯ ಜತೆ ಗಾಢ ಸಂಬಂಧ ಹೊಂದಿದೆ ಮತ್ತು ದೈಹಿಕ ಆರೋಗ್ಯ ಮತ್ತು ಜೀವನದ ಗುಣ ಮಟ್ಟಕ್ಕೆ ಮೂಲಕಾರಣ ವಾಗಿದೆ.
  ದೈಹಿಕ ಆರೋಗ್ಯವು ಮಾನಸಿಕ ಆರೋಗ್ಯದ ಜತೆ ಗಾಢ ಸಂಬಂಧ ಹೊಂದಿದೆ. ಮಾನಸಿಕ ಅವ್ಯವಸ್ಥೆಯು ವೈಯುಕ್ತಿಕ ಆರೋಗ್ಯಪೂರ್ಣ ವರ್ತನೆಗಳಾದ ಸೂಕ್ತ ಆಹಾರ ಸೇವನೆ, ಸಕ್ರಮ ವ್ಯಾಯಾಮ ,ಸಾಕಷ್ಟು ನಿದ್ರೆ, ಮಾನಸಿಕ ಅನಾರೋಗ್ಯವು ಸಾಮಾಜಿಕ ಸಮಸ್ಯೆಗಳಾದ ನಿರುದ್ಯೋಗ, ಒಡೆದ ಕುಟುಂಬ, ಬಡತನ, ಮಾದಕ ದ್ರವ್ಯಗಳ ಬಳಕೆ ಮತ್ತು ಸಂಬಂಧಿಸಿದ ಅಪರಾಧಗಳಿಗೆ ಕಾರಣವಾಗಬಹುದು.

  ReplyDelete
 3. ಈಗಿನ ಒತ್ತಡದ ಜೀವನ ಶೈಲಿ ಮಾನಸಿಕ ಒತ್ತಡಕ್ಕೆ ಕಾರಣವಾಗಿ ಅದೇ ಒತ್ತಡ ಬಳಿಕ ಮನೋರೋಗಗಳಿಗೆ ಕಾರಣವಾಗುತ್ತಿರುವುದು ಸರ್ವೆà ಸಾಮಾನ್ಯವಾಗಿದೆ. ಮಕ್ಕಳಿಗೆ ಓದಿನ ಒತ್ತಡ, ಕೆಲಸದಲ್ಲಿ ಟಾರ್ಗೆಟ್‌ನ ಒತ್ತಡ, ಸಂಸಾರಸ್ಥರಲ್ಲಿ ಹೆಂಡತಿ-ಮಕ್ಕಳು-ಮನೆ-ಕುಟುಂಬದ ಒತ್ತಡ, ಇಳಿ ವಯಸ್ಸಿನಲ್ಲಿ ತನ್ನ ಇರುವಿಕೆಯನ್ನು ಸಾಬೀತುಪಡಿಸಿಕೊಳ್ಳುವ ಒತ್ತಡ.... ಹೀಗೆ ಹುಟ್ಟಿನಿಂದ ಸಾವಿನತನಕ ಒತ್ತಡದ ಅಡಿಯಲ್ಲೇ ಬಾಳಬೇಕಾದ ಒತ್ತಡ..!!

  ReplyDelete