• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಡಾಲ್ಫಿನ್ ... ಡಾಲ್ಫಿನ್...!

ಮುಂಗಾರು ಮಳೆ ಆರಂಭವಾಗುವುದಕ್ಕೆ ಒಂದೆರಡು ದಿನವಿದೆ ಎನ್ನುವಾಗಲೇ ಕೇರಳದ ಕೋವಲಂಗೆ ತಲುಪಿರುತ್ತೇನೆ. ಅರಬ್ಬಿ ಸಮುದ್ರದತ್ತಣಿಂದ ಧಾವಿಸಿಬರುವ ಮುಂಗಾರು ಮೋಡಗಳು ಸುರಿಸುವ ಮಳೆಹನಿಗಳು ಮೊದಲು ಸ್ಪರ್ಶಿಸುವುದು ಕೋವಲಂ ಕಡಲ ತಡಿಯನ್ನು. ಮೊದಲ ಮುಂಗಾರು ಮಳೆಹನಿಗಳಿಗೆ ಮೈಯೋಡಿ ನೆನೆಯುವುದು ನನಗೆ ಪ್ರಿಯ. ಕಳೆದ ಏಳೆಂಟು ವರ್ಷಗಳಿಂದ ಈ ಹವ್ಯಾಸ ರೂಢಿಸಿಕೊಂಡಿದ್ದೇನೆ.
ಕೋವಲಂ ಕಡಲತೀರ
 ಸಾಮಾನ್ಯವಾಗಿ ಜೂನ್ ಎರಡನೇ ವಾರದಲ್ಲಿ ಮುಂಗಾರು ಪ್ರಾರಂಭ.  ಒಂದು ವಾರ ಮೊದಲೆ ಮುಂಗಾರು ಆರಂಭ ಎಂಬುದು ಹವಾಮಾನ ಇಲಾಖೆ ವರದಿ. ಕೋವಲಂ ತಲುಪಿದಾಗ ಮಳೆ ಇನ್ನೆರಡು ದಿನ ತಡವಾಗಬಹುದೆಂಬ ಸುದ್ದಿ. ಹವಾಮಾನದ ಕಥೆ ಯಾವಾಗ ಏನು ಎಂದು ಹೇಳಲಿಕ್ಕಾಗುವುದಿಲ್ಲ. ಸಮುದ್ರ ಸ್ನಾನ ಮಾಡಿದೆ. ಮೀಯಲು ಕೋವಲಂ ಕಡಲತಡಿ ಸುರಕ್ಷಿತ. ಮಂಗಳೂರಿನ ಪಣಂಬೂರು, ಸೋಮೇಶ್ವರ,ಉಲ್ಲಾಳ,ಕುಂದಾಪುರ ಸನಿಹದ ಮರವಂತೆ ಬೀಚ್ ಗಳು ಏಕ್ ದಂ ಡೀಪ್.
  
ಸಮುದ್ರಸ್ನಾನ ಮಾಡಿ,  ಅಲೆಗಳು ಭೂಮಿಗೆ ಮುತ್ತಿಕ್ಕುವುದನ್ನು ದಿಟ್ಟಿಸುತ್ತಾ ಕುಳಿತೆ. ಸ್ವಲ್ಪ ಹೊತ್ತಿಗೆ ದೊಡ್ಡ ಅಲೆಯೊಂದು ದಪ್ಪನೆಯ ಕಪ್ಪು ಆಕೃತಿಯೊಂದನ್ನು ಎಸೆದುಹೋಯಿತು. ಅದನ್ನು ಸ್ಪಷ್ಟವಾಗಿ ನೋಡುವ ಕುತೂಹಲವಾಗತೊಡಗಿತು. ಆಗಿನ್ನೂ ಜನ ವಿರಳವಾಗಿದ್ದರು. ಅಲ್ಲಲ್ಲಿ ಮೀನುಗಾರರಿದ್ದರು. ಸಮೀಪ ಹೋದೆ. ಡಾಲ್ಫಿನ್. ಅದು ಜೀವ ಕಳೆದುಕೊಂಡಿತ್ತು. ಅದರ ಬಾಯಿಯಲ್ಲಿ ಮಾಂಸದ ದೊಡ್ಡ ತಂಡು ಸಿಲುಕಿಕೊಂಡಿತ್ತು. ಮೃತ ಡಾಲ್ಫಿನ್ ನೋಡಿದ ನಂತರ ಮನಸು ವಿಹ್ವಲವಾಯಿತು.

ವರ್ಷಗಟ್ಟಲೆ ಸಮುದ್ರಯಾನ ಮಾಡಿದ ನಾವಿಕರು ಡಾಲ್ಫಿನ್ ಗಳ ಕುರಿತು ಬರೆದಿದ್ದ ಕಥೆಗಳನ್ನು ಓದಿದ್ದೆ. ಪಳಗಿಸಿದ ಡಾಲ್ಫಿನ್ ಗಳನ್ನು ನೋಡಿದ್ದೆ. ಆಗೆಲ್ಲ ಅವುಗಳ ಬುದ್ದಿವಂತಿಕೆಗೆ ಬೆರಗುಗೊಂಡಿದ್ದೆ. ಸಮುದ್ರದೊಳಗೆ, ಶತ್ರುರಾಷ್ಟ್ರಗಳು ಇರಿಸಿದ ಸ್ಪೋಟಕಗಳನ್ನು ಪತ್ತೆಹಚ್ಚಲು-ಸಬ್ ಮೆರಿನ್ ಗಳ ಮೇಲೆ ನಿಗಾ ಇಡಲು ಕೆಲವು ರಾಷ್ಟ್ರಗಳು ಡಾಲ್ಫಿನ್ ಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತವೆ.
ತುಂಬ ಆಳ ಸಮುದ್ರದಲ್ಲಿ ಹಡಗು ಸಾಗುತ್ತಿರುವಾಗ ಡಾಲ್ಫಿನ್ ಗಳ ಸಮೂಹವೇ ಹಿಂಬಾಲಿಸುವದನ್ನು ಕಂಡಿದ್ದೇನೆ. ಮನುಷ್ಯರನ್ನು ಹತ್ತಿರದಿಂದ ಕಂಡಾಗ ಇವುಗಳ ಕಣ್ಣುಗಳು ಸಂತಸದಿಂದ ಮಿನುಗುವುದನ್ನು ನೋಡಿದ್ದೇನೆ. ಆಗೆಲ್ಲ ಮನುಷ್ಯರೆಡೆಗೆ ಡಾಲ್ಪಿನ್ ಗಳಿಗೆ ಏಕಿಂಥ ಪ್ರೀತಿ ಅಂದುಕೊಂಡಿದ್ದೇನೆ.ಇವುಗಳ ಬಗ್ಗೆ ಸಮುದ್ರಜೀವಿಗಳ ವಿದೇಶಿ ಬೇಟೆಗಾರರು ತೋರಿಸುತ್ತಿರುವ ನಿರ್ದಯತೆಯಿಂದ ಡಾಲ್ಫಿನ್ ಗಳು ಅಳಿವಿನ ಅಂಚಿಗೆ ಸಾಗುತ್ತಿವೆ. ಇಂಥ ಬೇಟೆಗಾರರು ಎದುರು ಬಂದಾಗಲೂ ಡಾಲ್ಫಿನ್ ಖಂಡಿತಾ ಪ್ರೀತಿಯಿಂದ ಕಣ್ಣು ಮಿನುಗಿಸಿರುತ್ತದೆ. ಇಂಥ ಪ್ರೀತಿ ಆ ಕಠಿಣ ಹೃದಯಿಗಳನ್ನು ಏಕೆ ಕರಗಿಸುವುದಿಲ್ಲ...!?
ಹೀಗೆಲ್ಲ ಯೋಚಿಸುತ್ತಿರುವಾಗಲೆ ಅತ್ತ ಬಂದ ಕೆಲವು ಮೀನುಗಾರರು ಆ ಡಾಲ್ಫಿನ್ ಗೆ ಹಗ್ಗ ಕಟ್ಟಿ ದರದರ ಎಳೆದೊಯ್ಯತೊಡಗಿದರು. ಅಪರೂಪದ ಮಾಂಸದೂಟ ಮಾಡುವ ಅವಕಾಶ ದೊರೆತಿದೆ ಎನ್ನುವ ಮಾತುಗಳು ಅವರಿಂದ ಕೇಳಿಬರತೊಡಗಿತು.ಈ ದೃಶ್ಯ ಅದಲು-ಬದಲಾಗಿದ್ದರೆ ಡಾಲ್ಫಿನ್ ಗಳ ವರ್ತನೆ ಹೇಗಿರುತ್ತಿತ್ತು ಎಂದು ಯೋಚಿಸುತ್ತಾ ಬ್ಯಾಗಿನಿಂದ ಕ್ಯಾಮರಾ ತೆಗೆದು ಕ್ಲಿಕಿಸತೊಡಗಿದೆ

No comments:

Post a Comment