• ಮುಖಪುಟ
  • ಸಿನಿಮಾ
  • ದೇಗುಲ ಸರಣಿ
  • ರಾಜಕೀಯ
  • ಭಾಷೆ
  • ಸಾಹಿತ್ಯ
  • ಪರಿಸರ
  • ರಂಗ ಕಲೆ
  • ಮಾಧ್ಯಮ
  • ಪ್ರವಾಸ
  • ಜೀವನಶೈಲಿ
  • ನನ್ನ ಬಗ್ಗೆ
  • ಸಂಪರ್ಕಿಸಿ

The Pack ; ಕಾಡಿನ ಸಂಸಾರದ ಹೃದಯಂಗಮ ಕಥನ..!




 ಋಷಿ ಸದೃಶ್ಯ ಸಾಧನೆ ಮಾಡಿದ ಕೃಪಾಕರ ಮತ್ತು ಸೇನಾನಿ

 ವನ್ಯಜೀವಿಗಳ ಬಗ್ಗೆ ಅಧ್ಯಯನ ಮಾಡುವುದು ಒಂದು ಸವಾಲು. ಅದರಲ್ಲಿಯೂ ಒಂದು ನಿರ್ದಿಷ್ಟ ವರ್ಗದ ಪ್ರಾಣಿಯ ಮೇಲೆ ೧೭ ವರ್ಷಗಳ ನಿರಂತರ ಅವಲೋಕನ ಮತ್ತು ಅಧ್ಯಯನ ಕಠಿಣ ತಪ್ಪಸ್ಸು. ಇಂಥ ಸಾಧನೆ ಮಾಡಿದವರು ಕೃಪಾಕರ ಮತ್ತು ಸೇನಾನಿ. ಇವರ ಅಗಾಧ ಪರಿಶ್ರಮದ ಪರಿಣಾಮ ಇವರು ಕೆನ್ನಾಯಿಗಳ ಜೀವನಗಾಥೆ ಕುರಿತು ಚಿತ್ರೀಕರಿಸಿದ ' ದಿ ಪ್ಯಾಕ್ ' ವನ್ಯಜೀವಿ ಡಾಕ್ಯುಮೆಂಟರಿಗೆ 'ಗ್ರೀನ್ ಆಸ್ಕರ್' ಪುರಸ್ಕಾರ ಲಭಿಸಿದೆ. ಕಾಡಿನ ಜೀವಿಗಳ ಸೂಕ್ಷ್ಮ ಜೀವನ ವಿವರಿಸುವ ಡಾಕ್ಯುಮೆಂಟರಿಗೆ ಕೊಡಮಾಡುವ ಅಂತರಾಷ್ಟ್ರೀಯ ಮಟ್ಟದ ಅತ್ಯುನ್ನತ ಪ್ರಶಸ್ತಿಯಿದು. ಇಂಥ ಗೌರವ ಪಡೆಯುವುದು ಸುಲಭವಲ್ಲ. ವಿಶ್ವದ ನಾನಾ ದೇಶಗಳ ವನ್ಯಜೀವಿ ಅಧ್ಯಯನಕಾರರು ಈ ಪ್ರಶಸ್ತಿಗೆ ತಮ್ಮ ಚಿತ್ರಗಳನ್ನು ಕಳುಯಿಸುತ್ತಾರೆ. ೨೦೧೦ರಲ್ಲಿ ಪ್ರಶಸ್ತಿ ಪಡೆಯಲು ಸ್ಪರ್ಧೆಗೆ ಬಂದ ಚಿತ್ರಗಳ ಸಂಖ್ಯೆ ೪೪೬ !. ಇದರಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾದ ಚಿತ್ರಗಳ ಸಂಖ್ಯೆ ೬೦. ಇವುಗಳಲ್ಲಿ ತೀರ್ಪುಗಾರರ ತೀವ್ರ ಮೆಚ್ಚುಗೆ ಪಡೆದಿದ್ದು 'ದಿ ಪ್ಯಾಕ್' ಸ್ವರ್ಧೆಗೆ ಬಂದಿದ್ದ ವಿವಿಧ ದೇಶಗಳ ವನ್ಯಜೀವಿ ಅಧ್ಯಯನಕಾರರಿಂದಲೂ ಮುಕ್ತಕಂಠದ ಪ್ರಶಂಸೆಗೆ ಈ ಚಿತ್ರ ಒಳಗಾಗಿದೆ. ಇಂಥ ಅಪೂರ್ವ ಸಾಧನೆ ಮಾಡಿದ 'ಒಂದೇ ಆತ್ಮ ಎರಡು ದೇಹ' ಎಂಬಂತಿರುವ ಕೃಪಾಕರ ಮತ್ತು ಸೇನಾನಿ ಅವರೊಂದಿಗೆ ಕುಳಿತು ಚಿತ್ರ ವೀಕ್ಷಿಸುವ ಬಳಿಕ ಸಂವಾದಿಸುವ ಕಾರ್ಯಕ್ರಮ ಬೆಂಗಳೂರಿನ ಯವನಿಕಾ ಸಭಾಂಗಣದಲ್ಲಿ ಸೆಪ್ಟೆಂಬರ್ ೩, ೨೦೧೧ರಲ್ಲಿ ನಡೆಯಿತು. 'ಸಂವಾದ ಡಾಟ್ ಕಾಮ್ ಬಳಗದವರು ಇದನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದರು. ಈ ಸಂದರ್ಭದಲ್ಲಿ ನಾನು ತೆಗೆದಿರುವ ಚಿತ್ರಗಳು ನಿಮ್ಮ ಮುಂದಿವೆ.
ಕೃಪಾಕರ ಮತ್ತು ಸೇನಾನಿ ಅವರೊಂದಿಗೆ ಖ್ಯಾತ ಲೇಖಕ ಕೆ. ಪುಟ್ಟಸ್ವಾಮಿ, ಪರಿಸರವಾದಿ ಯಲ್ಲಪ್ಪ ರೆಡ್ಡಿ
ಸಿಡಿ ಬಿಡುಗಡೆ
ಮಾತುಗಳನ್ನು ಕೇಳಿಸಿಕೊಳ್ಳುವುದರಲ್ಲಿಯೂ ತನ್ಮಯತೆ
ಸ್ನೇಹಮಯ ಸಂಭಾಷಣೆ
ಸಾಧನೆಯ ಮೆಲಕು

ಕೆನ್ನಾಯಿಗಳು  ಮನುಷ್ಯರಿಗಿಂತ ಸೆನ್ಸಿಟಿವ್ ಕಣ್ರಿ
ಭೂಮಿಗೀತ ಚಿತ್ರ ನಿರ್ದೇಶಕ ಕೇಸರ ಹರವು, ಶಾಸಕ ಕೃಷ್ಣಭೈರೇಗೌಡ, ವನ್ಯಜೀವಿ  ಛಾಯಾಗ್ರಾಹಕ ಪ್ರೇಮ್ ಕುಮಾರ್ ಮತ್ತು ಕಂಠೀರವ ಸ್ಟುಡಿಯೂ ವ್ಯವಸ್ಥಾಪಕ ನಿರ್ದೇಶಕ ವಿಶುಕುಮಾರ್
ಸಂವಾದಕ್ಕೆ ಚಾಲನೆ ನೀಡುತ್ತಿರುವ ಹಿರಿಯ ಪತ್ರಕರ್ತ ಶೇಖರ್ ಪೂರ್ಣ



ವನ್ಯಜೀವಿ ವಲಯದ ತಿಳಿವಳಿಕೆ ಇರುವ ಹಿರಿಯ ಪತ್ರಕರ್ತ ವಿನೋದ್ ಕುಮಾರ್ ಬಿ. ನಾಯಕ್
ಸಂವಾದಿಸುತ್ತಿರುವ ಸೇನಾನಿ ಮತ್ತು ವಿಶುಕುಮಾರ್
ಚಹಾ ವಿರಾಮದಲ್ಲಿ ಚರ್ಚೆಯಲ್ಲಿ ತೊಡಗಿರುವ ವೀಕ್ಷಕರು
ಕಿಕ್ಕಿರಿದಿದ್ದ ಯವನಿಕಾ ಸಭಾಂಗಣ
ಸಭಾಂಗಣದಲ್ಲಿ ಷೂಟಿಂಗ್ !
Add caption
ನಮದೊಂದು ಪ್ರಶ್ನೆ ....
ಹದಿನೇಳು ವರ್ಷದ ವನವಾಸ ಹೇಗೆ ಮಾಡಿದ್ರಿ...?

ಸೇನಾನಿ ಅವರೊಂದಿಗೆ ಚಾರಣಿಗ ಅವಿನಾಶ್ ಕನ್ನಮನವರ್
ಕೆನ್ನಾಯಿಗಳ ಬಗ್ಗೆ ನೀವು ಎಷ್ಟೆ ವಿವರ ಕೇಳಿ ಬೇಜಾರಿಲ್ಲದೆ ಉತ್ತರಿಸುತ್ತೇನೆ ಎನುವಂತಿರುವ ಸೇನಾನಿ
ನಿಮ್ಮೊಂದಿಗೆ ಇನ್ನೂ ಮಾತನಾಡಬೇಕು ಎನುವಂತಿರುವ ವೀಕ್ಷಕರು
ಬೆಂಗಳೂರಿನ ನೃಪತುಂಗಾ ರಸ್ತೆಯಲ್ಲಿರುವ ಯವನಿಕಾ ಸಭಾಂಗಣದಲ್ಲಿ ಸಂವಾದವಿತ್ತು




Add caption
ಜುಗಲ್ ಬಂದಿ !
ಸ್ನೇಹಿತರ ಸಾಧನೆಯನ್ನು ತನ್ಮಯತೆಯಿಂದ ವಿವರಿಸುತ್ತಿರುವ ವಿಶುಕುಮಾರ್

ಕೃಪಾಕರ್-ಸೇನಾನಿ ಅವರೊಂದಿಗಿನ ಒಡನಾಟದ ನೆನಪು ಮಾಡಿಕೊಳ್ಳುತ್ತಿರುವ ಕೆ. ಪುಟ್ಟಸ್ವಾಮಿ    

1 comment:

  1. krupaakara senaani avara saadhane ananya. avaru thegeda chaayaachitragalannoo prakatisi

    ReplyDelete