• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ವಜ್ರಖಚಿತ ಕಿರೀಟ ಹಿಂದಿರುಗಿಸಬೇಕೆ...?

   ತಿರುಪತಿಯಲ್ಲಿ ಸೆಪ್ಟೆಂಬರ್ 6, 2011 ರಂದು  ಭಕ್ತ ಸಮೂಹದ ಕೂಗೂ ಹೀಗಿತ್ತು. ' ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆಯ ಪಾಪದ ಹಣದಿಂದ ನೀಡಿದ ವಜ್ರಖಚಿತ ಕಿರೀಟವನ್ನು ತಿಮ್ಮಪ್ಪನಿಗೆ ತೊಡಿಸಬಾರದು. ಅದನ್ನು ಹಿಂದಿರುಗಿಸಬೇಕು. ಅಕ್ರಮ ಹಣದಿಂದ ಬಂದ ದುಡ್ಡಿನಿಂದ ಹರಕೆ ತೀರಿಸಿರುವ ರೆಡ್ಡಿಗಳ ಕಿರೀಟದಿಂದ ದೇವರು ಅಪವಿತ್ರರಾಗುತ್ತಾರೆ. ಆದ್ದರಿಂದ ದೇಗುಲದಲ್ಲಿ ಇಂಥ ಕಿರೀಟ ಇರುವುದು ಬೇಡವೇಬೇಡ ಮೊದಲು ಹಿಂದಿರುಗಿಸಿ' ಹಿಂದೆ ಎಂದೂ ಕೇಳಿರದ ಬೇಡಿಕೆ-ಆಗ್ರಹ-ಒತ್ತಡ ಆಡಳಿತ ಮಂಡಳಿಯನ್ನು ಕಂಗಾಲಾಗಿಸಿದೆ. ಇಂಥದೊಂದು ಧ್ವನಿ ಬರಬಹುದು ಎಂಬ ಕಲ್ಪನೆಯೆ ಇರದಿದ್ದು ಕಾರಣ. ಈ ಸಂದರ್ಭದಲ್ಲಿ ದೇಗುಲದ ಆಡಳಿತ ಮಂಡಳಿ ಏನು ಮಾಡಬಹುದು-ಏನು ಮಾಡಬೇಕು....?

ಎರಡು ವರ್ಷ ಎರಡು ತಿಂಗಳ ( ಜೂನ್ 11 ಗುರುವಾರ, 2009) ರಂದು ಅಂದಿನ ಹಾಲಿ ಸಚಿವ ಜನಾರ್ದನ ರೆಡ್ಡಿ ಕಣ್ಣು ಕೊರೈಸುತ್ತಿದ್ದ ವಜ್ರಖಚಿತ ಕಿರೀಟವನ್ನು ತಿರುಪತಿ ದೇಗುಲಕ್ಕೆ ನೀಡಿದರು. ರೆಡ್ಡಿ ಕುಟುಂಬ ಮತ್ತು ಆಪ್ತ ಬಳಗದ ಮಾಜಿಯಾಗಿರದ ಸಚಿವ ಶ್ರೀರಾಮುಲು ಶಾಸಕ ಸುರೇಶ್ ಬಾಬು ಜೊತೆಗಿದ್ದರು. ತಿರುಪತಿ-ತಿರುಮಲ ದೇವಸ್ಥಾನಮ್ ಮಂಡಳಿಯ ಅಧ್ಯಕ್ಷ ಆದಿಕೇಶವಲು ಮತ್ತು ಇನ್ನಿತರ ಪ್ರಮುಖ ಸದಸ್ಯರು  ಖುದ್ದು ಹಾಜರಿದ್ದು ದೇಗುಲದ ಪರವಾಗಿ ಕಿರೀಟ ಸ್ವೀಕರಿಸಿದರು. ಇದಕ್ಕೂ ಮುನ್ನ ದೇವಾಲಯದ ಪ್ರಾಂಗಣದಲ್ಲಿ ಕಿರೀಟದ ಮೆರವಣಿಗೆ-ವಿಶೇಷ ಪೂಜೆ ಸಲ್ಲಿಸಲಾಗಿತ್ತು. 'ನಾನು ಇಷ್ಟು ಉನ್ನತ ಸ್ಥಾನಕ್ಕೇರಲು ದೇವರ ಕೃಪೆಯೆ ಕಾರಣ. ಈ ಕಾರಣದಿಂದಲೇ ಇಷ್ಟು ಸಣ್ಣ ಕಾಣಿಕೆ ಅರ್ಪಿಸುತ್ತಿದ್ದೇನೆ.ಮಾಧವ ಸೇವೆಯಲ್ಲಿ ನನಗೆ ಅಪಾರ ನಂಬಿಕೆ. ಕಡಪಾ ಜಿಲ್ಲೆಯಲ್ಲಿ ಬೃಹತ್ ಉಕ್ಕು ತಯಾರಿಕಾ ಘಟಕ ಸ್ಥಾಪಿಸುತ್ತಿದ್ದೇನೆ. ಇದರಿಂದ 25 ಸಾವಿರ ಮಂದಿಗೆ  ಉದ್ಯೋಗ ದೊರೆಯುತ್ತದೆ. ಮಾನವ ಸೇವೆಯಲ್ಲಿಯೂ ನನಗೆ ನಂಬಿಕೆ ಇದೆ'  ಇದು ಜನಾರ್ದನ ರೆಡ್ಡಿ ಅಂದಿನ ಮಾತು.

ಥಳಥಳನೇ ಹೊಳೆಯುತ್ತಿದ್ದ ವಜ್ರಖಚಿತ ಕಿರೀಟದ ಬೆಲೆ ಕೇಳಿದೊಡನೆ ಅಲ್ಲಿದ್ದವರು ಒಮ್ಮೆ ಬೆಚ್ಚಿದ್ದರು. ತಿರುಪತಿ ತಿಮ್ಮಪ್ಪನಿಗೆ ಭಾರಿ ಬೆಲೆಬಾಳುವ ಅತ್ಯಮೂಲ್ಯ ವಸ್ತುಗಳು ಕಾಣಿಕೆಯಾಗಿ ದೊರೆಯುವುದು ಸಾಮಾನ್ಯ. ಆದರೆ 45 ಕೋಟಿ ರುಪಾಯಿ ಮೌಲ್ಯದ; ಅತ್ಯಮೂಲ್ಯ ವಜ್ರಗಳಿದ್ದ ಕಿರೀಟ ಬಂದಿರಲಿಲ್ಲ !

30 ಕೆಜಿ ತೂಕದ ಈ ಕಿರೀಟವನ್ನು ಮಾಡಲು ತಮಿಳುನಾಡು ಕೊಯಮತ್ತೂರಿನ ಕೀರ್ತಿಲಾಲ್ ಜ್ಯೂವೆಲರ್ಸ್ ಒಂಭತ್ತು ತಿಂಗಳ ಅವಧಿ ತೆಗೆದುಕೊಂಡಿದ್ದರು. ಇದನ್ನು ನಿರ್ಮಿಸುವ ಅವಧಿಯಲ್ಲಿ 32 ಕೆಜಿ ಅಪರಂಜಿ ಚಿನ್ನ ಬಳಸಲಾಯಿತು. ನಾಲ್ಕು ಸಾವಿರ ಕ್ಯಾರಟ್ ತೂಕದ ಸಹಸ್ರಾರು ಸಣ್ಣಸಣ್ಣ ಡೈಮಂಡ್ಸ್, 890 ಕ್ಯಾರಟ್ ತೂಕದ ಎಮರಾಲ್ಡ್ಸ್ (ಪಚ್ಚೆ) ಬಳಸಿ ಎರಡೂವರೆ ಅಡಿ ಎತ್ತರದ ಕಿರೀಟವನ್ನು ಕಲಾತ್ಮಕವಾಗಿ   ನಿರ್ಮಿಸಲಾಯಿತು. ಪಚ್ಚೆಯನ್ನು ಆಫ್ರಿಕಾದಿಂದ ಆಮದು ಮಾಡಿಕೊಳ್ಳಲಾಗಿತ್ತು. ಇದರ ಬೆಲೆಯೆ 10 ಕೋಟಿ !

ಆದರೆ ಕಡಪಾದಲ್ಲಿ 'ಬ್ರಹ್ಮಿಣಿ ಸ್ಟೀಲ್ಸ್' ಆರಂಭಗೊಳ್ಳಲಿಲ್ಲ. 25 ಸಾವಿರ ಮಂದಿಗೆ ಉದ್ಯೋಗವೂ ದೊರೆಯಲಿಲ್ಲ. ಕಡೆಗೆ ಬಳ್ಳಾರಿಯಲ್ಲಿ ಇದನ್ನು ಆರಂಭಿಸುತ್ತೇವೆ ಎಂದು ಕರ್ನಾಟಕ ಸರಕಾರದಿಂದ ಲೈಸನ್ಸ್-ಜಮೀನು ಎಲ್ಲವನ್ನೂ ಪಡೆದುಕೊಂಡರು. ಆದರೆ ಇಲ್ಲಿಯೂ ಇವರಿಂದ ಯೋಜನೆ ಆರಂಭಗೊಳ್ಳಲಿಲ್ಲ. ಹಾಗಿದ್ದರೆ ಆ ಮಾಧವನಿಗೆ ಜರ್ನಾದನ ರೆಡ್ಡಿ ಕಾಣಿಕೆ-ಸೇವೆ ಇಷ್ಟವಾಗಲಿಲ್ಲವೆ...? ಈ ವಿಷಯ ಅತ್ತ ಇರಲಿ.. ಈಗ ಕಿರೀಟದ ವಿಷಯಕ್ಕೆ ಮತ್ತೆ ಬರೋಣ.

ಭಕ್ತ ಸಮುದಾಯದ ಈ ಆಗ್ರಹ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಕಿರೀಟವನ್ನು ವಾಪ್ಪಸ್ಸು ಮಾಡಲೇಬೇಕು ಎಂಬ ಒತ್ತಡ ಹೆಚ್ಚುತ್ತಿದೆ. ಇದು ಈಡೇರಿದರೆ ಇಡೀ ಭಾರತದಲ್ಲಿಯೆ ಅತ್ಯಪೂರ್ವ ಘಟನೆಗೆ ತಿರುಪತಿ ಸಾಕ್ಷಿಯಾಗುತ್ತದೆ. ಇದುವರೆಗೆ ದೇಗುಲಗಳಿಗೆ ಕಾಣಿಕೆ ನೀಡಿದವರು ಆರೋಪಗಳಿಂದ ಜೈಲಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾದಾಗ ಅವರು ನೀಡಿದ್ದನ್ನು ಹಿಂದಿರುಗಿಸಿದ ಮತ್ತು ಭಕ್ತ ಸಮುದಾಯ ಇಂಥ ಒತ್ತಾಯ ಮುಂದಿಟ್ಟ ಉದಾಹರಣೆ ಇಲ್ಲ. 'ತಿರುಪತಿ-ತಿರುಮಲ ದೇವಸ್ಥಾನಮ್' ಆಡಳಿತ ಮಂಡಳಿ ಮುಂದೇನು ಮಾಡಬೇಕು ಎಂಬ ಯೋಚನೆಯಲ್ಲಿದೆ. ನಿಮ್ಮ ಸಲಹೆ ಏನು...? 

21 comments:

 1. ಅವಿನಾಶ ಕನ್ನಮ್ಮನವರWednesday, 07 September, 2011

  ನನಗನಿಸುತ್ತೆ ಇವರ ವಜ್ರ ಕಿರೀಟ (ಲ೦ಚದ) ಭಾರದಿಂದಾನೆ ತಿಮ್ಮಪ್ಪನ ಮೂರ್ತಿಯಲ್ಲಿ ಬಿರುಕು ಕಾಣಿಸಿ ಕೊಡಿರಬೇಕು! ;-)

  ReplyDelete
 2. I really facinated by the way the article has given me the information.. I think as this money has come from illigal mining and other activities, the crow has to be sold and the amount should be used for the development of the nation by TTD..

  ReplyDelete
 3. If TTD returns " ALL" the offerings given by illegal or wrong earnings , then Balaji will be poorest god on the earth

  ReplyDelete
 4. Chandrashekar Sandur SomaiyanavaraWednesday, 07 September, 2011

  modalu aa kelasa madabeku adu akramadinda sampadane mulaka madisida kireeta........ adu sarkrakke serabeekada aasthi

  ReplyDelete
 5. ತಿರುಪತಿ ಹುಂಡಿಗೆ ಹಾಕಿದ ದುಡ್ಡು , ಸ್ಮಶಾನಕ್ಕೆ ಹೋದ ಹೆಣ ಎರಡು ಒಂದೇ , ಮತ್ತೆ ವಾಪಸ್ ಬರೋಲ್ಲ !!!

  ReplyDelete
 6. Khanditavagi hindirugisabeku....

  ReplyDelete
 7. ಹುಚ್ಚು ಮನಸ್ಸಿನ ಹತ್ತು ಹಲವು ವಿಕಾರಗಳಲ್ಲಿ ದೇವರು ಅನ್ನುವ ವಿಕಾರವೂ ಒಂದು. ಮನುಷ್ಯ ದೇವರು ಅನ್ನುವ ಒಂದು ಐಡಿಯಾವನ್ನು ಸೃಷ್ಠಿಸಿದ್ದೇ ಅದಕ್ಕೆ.ಇದ್ದದ್ದನ್ನು ಇದ್ದಂತೆಯೇ ನೇರವಾಗಿ ಹೇಳಿದರೆ ನೀವು ಪರಮ ಶತ್ರುವಾಗುತ್ತೀರಿ.
  ಒಬ್ಬ ಭೃಷ್ಠ, ಅಪಪೋಲಿ ಬೀದಿ ಬಿಕಾರಿ, ಕೊಲೆಗಾರ, ಲಫಂಗ ದೇವರ ಮುಂದೆ ಪ್ರಾರ್ಥಿಸಿದರೂ ಗೊತ್ತಿಲ್ಲ. ಒಬ್ಬ ಸಜ್ಜನ, ನಿರ್ಮಲ ಮನಸ್ಸಿನವನು ಪ್ರಾರ್ಥಿಸಿದರೂ ದೇವರು ಏನು ಮಾತಾಡುವುದಿಲ್ಲ. ಎಲ್ಲರಿಗೂ ಅವರ ಕಾರ್ಯ ಮಾಡಲು ಆಶೀರ್ವಾದ ಮಾಡುತ್ತಿದ್ದಾನೆ ಅಂತ ಅರ್ಥೈಸಬಹುದೇ? ಮಾತನಾಡದ ದೇವರ ಹೆಸರಿನಲ್ಲಿ ಹೆಣ್ಣು ಮಕ್ಕಳನ್ನೂ ದೇವದಾಸಿಯರನ್ನಾಗಿ ಮಾಡಿದ ಮನುಷ್ಯ, ಇನ್ನಿಲ್ಲದ ಲಾಲಸೆ ಮುಳ್ಳಿನ ಹಾಸಿಗೆಯಲ್ಲಿ ಸಮಾಜವನ್ನು ಎತ್ತಲೋ ಸಾಗಿಸಿಬಿಟ್ಟ. ಇವತ್ತಿಗೂ ಕೂಡ ಕುಂಕುಮ, ಭಸ್ಮ ಹಾಕಿ, ಮಂತ್ರದ ನೀರು ಹಾಕಿ ಜ್ವರ-ಶೀತ- ನೆಗಡಿ ವಾಸಿ ಮಾಡಲು ಮಸಣಕ್ಕೆ ಕಳುಹಿಸಿದ ಉದಾಹರಣೆಗಳಿವೆ.
  ಮನಃಶ್ಯಾಂತಿ ಅನ್ನೋದು ಬೇಕಲ್ಲ.ಮಾಟ- ಮಂತ್ರ ಮಾಡಿ, ತಾಯಿತ ಕಟ್ಟಿಸಿ ಶೀತ-ನೆಗಡಿ-ಜ್ವರವನ್ನು ವಾಸಿ ಮಾಡಿಸುವ ಮೂಡ ನಂಬಿಕೆಗಳ ಮನಸ್ಥಿತಿಗಳನ್ನು ಆಲೋಚಿಸುವಾಗ ಎಷ್ಟು ಮುಗ್ದರು ಅನ್ನಿಸುವುದು ಸಹಜ.
  ದೇವರು ಮಾತನಾಡುವುದಿಲ್ಲ. ಅವನನ್ನು ಶಿಲುಬೆಯಲ್ಲಿ ಕುಳ್ಳಿರಿಸಿಯೋ, ಮಂದಿರದಲ್ಲಿ ಮೂರ್ತಿ ಮಾಡಿಯೋ,ಮಸೀದಿಯಲ್ಲಿ ನಮಾಜು ಮುಗಿಸಿಯೋ ಆತ್ಮ ಸಂತೃಪ್ತಿಯನ್ನು ಕಾಣುತ್ತಿದ್ದೇವೆ. ಏಕೆ ಅನ್ನುವ ಪ್ರಶ್ನೆ. ನೀವು ಮಾಡಿದ ತಪ್ಪನ್ನು ನೇರವಾಗಿ ಬಾಯ್ಬಿಟ್ಟು ದೇವರು ಪ್ರಶ್ನಿಸುವಂತಿದ್ದರೆ ಯಾರೂ ಅವನನ್ನು ಗೌರವಿಸುವುದಿಲ್ಲ. ಅದಕ್ಕೆ ಎಲ್ಲರಿಗೂ ಮೌನ ತುಂಬಾ ಇಷ್ಟವಾಗುತ್ತದೆ. ಬಾಯಿ ಮುಚ್ಚಿಕೊಂಡಿದ್ದರೆ ಚೆನ್ನ. ಅದನ್ನೇ ದೇವರು ಅನ್ನುವ ಹೆಸರಿನಲ್ಲಿ ಮನುಷ್ಯ ಮಾಡಿದ. ನಿಜವಾದ ದೇವರೇ ಬೇರೆ.
  ನಾವು ಕೊಡುವ ಹಣ್ಣು- ಹಂಪಲುಗಳನ್ನೋ ದೇವರು ಮನುಷ್ಯರಿಗೆ ಕೊಡದೆ ನೇರವಾಗಿ ತಿನ್ನುವಂತಿದ್ದರೆ ಗತಿಯೇನು? ನೀವು ಕೊಡುವ ಕೋಳಿ-ಕುರಿ ಬಲಿಯನ್ನು ನೇರವಾಗಿ ಅವನೇ ತೆಗೆದುಕೊಳ್ಳುವಂತಿದ್ದರೆ ಏನಾಗುತ್ತಿತ್ತೋ? ದೇವರ ಹೆಸರಿನಲ್ಲಿ ಒಂದು ವ್ಯವಸ್ಥಿತ ಸ್ವಾರ್ಥವನ್ನು ಮನುಷ್ಯ ಹುಟ್ಟು ಹಾಕಿದ. ಅದನ್ನು ಎಲ್ಲರೂ ಸ್ವಾರ್ಥಕ್ಕೆ ಬಳಸಿದರು.
  ದೇವರು ಅನ್ನುವ ಈ ಪದಕ್ಕೆ ಎಲ್ಲಾ ಮಂದಿಗಳು ದಾಸರು ಅಂತ ಕಪಟಿಗಳಿಗೆ ಗೊತ್ತು. ಹಾಗಂತ ಒಂದು " ಮಾಸ್‍ ಹಿಪ್ನಾಟಿಸಂ" ಸೃಷ್ಠಿಯಾಗುತ್ತದೆ. ಅದು ರಾಜಕೀಯಕ್ಕೂ, ಸಮಾಜಕ್ಕೂ, ಮನೆ ಅನ್ನುವ ಕುಟುಂಬಕ್ಕೂ, ಕ್ಷಣಿಕ ಸುಖದ ಆಸೆಗೆ ದೇವದಾಸಿಯರೆಂಬ ಹಣೆಪಟ್ಟಿಗೂ. ಮಾತಾನಾಡದ ದೇವರಿಗೆ ವಜ್ರದ ಕಿರೀಟ ಮಾತ್ರವಲ್ಲ, ಹೆಚ್ಚೆಂದರೆ ಮನುಷ್ಯನನ್ನೇ ಬಲಿಕೊಟ್ಟ ಉದಾಹರಣೆಗಳು ಮರುಕಳಿಸಬಹುದು. ಅದನ್ನೇ ಒಂದೇ ಒಂದು ಸಾಕ್ಷಿಸಿಗೆ ಹತ್ತು ಹಲವು ಮುಖಗಳನ್ನು ತೆರೆದಿಡುವ ಜನಾರ್ದನ ರೆಡ್ಡಿ ಅನ್ನುವ ಅಡ್ಡೆಗಳು ಮಾಡಿದರು. ಕಾಲಾಯ ತಸ್ಮಯೆಃ ನಮಃ....

  ReplyDelete
 8. ‎Ravi Murnad ನಿಮ್ಮ ಮಾತುಗಳು ಅಕ್ಷರಶ: ಸತ್ಯ... ಈ ಮಾತುಗಳು ವೇದಗಳಲ್ಲಿ ಯಾವತ್ತೋ ಸಾರಲ್ಪಟ್ಟಿವೆ. ಜನಸಾಮಾನ್ಯ ಜೀವನದಿಂದ ಈ ಮೌಢ್ಯತೆ ಯಾವಾಗ ಮಾಯವಾಗುವಿದೋ ಆಗ ಮನುಕುಲದ ಉದ್ಧ್ರಾರದ ಆರಂಭ...

  ReplyDelete
 9. ದೇವರು ಜನಾರ್ದನ ರೆಡ್ಡಿಯೊಂದಿಗೆ ಕಿರೀಟ ಕೆಲಳುಇಲ್ಲ ಅದನ್ನು ವಾಪಾಸುಕೊಟ್ಟರೆ ಬೇಸರಗೊಲ್ಲುವದು ಇಲ್ಲ ಎಲ್ಲ ಅವರವರ ನಂಬಿಕೆ .ಕಳ್ಳರು ಕಿರೀತಕೊಟ್ಟರು ಜೈಲಿಗೆಹೊಗುತ್ತಾರೆ ಕೊಡದಿದ್ದರು ಹೋಗುತ್ತಾರೆ .ಕಳ್ಳತನ ಮಾಡದಿರುವದು ಉತ್ತಮ

  ReplyDelete
 10. Khandita adanna hindakke kodabeku

  ReplyDelete
 11. ಅಕ್ರಮ ದುಡ್ಡು ತಿಮ್ಮಪ್ಪನಿಗೆ ಬೇಡ ಅನ್ನೋದಾದ್ರೆ...ಕೀರಿಟ ಬಿಡಿ ಪುಟುಗೊಸಿನೂ ಇರೋದಿಲ್ಲ

  ReplyDelete
 12. ಶಿಶಿರ ಚಂದ್ರWednesday, 07 September, 2011

  ಅಂತು ಜನಾರ್ಧನ ರೆಡ್ಡಿ ಜನಗಳಿಗೆ ಅಲ್ಲಾ, ದೇವರಿಗೂ ಬ್ರಷ್ಟಚಾರದಿಂದ ಮಾಡಿದ ಹಣದಿಂದ ಮೋಸ ಮಾಡಿ ತಿಮ್ಮಪ್ಪನಿಗೂ ತನ್ನ ಪರವಾಗಿ ಮಾಡಿಕೊಳ್ಳಲು ಸುಮಾರು ಕೋಟಿ ರುಪಾಯಿ ಕಾಣಿಕೆ ನೀಡಿದರು, ಆ ಭಗವಂತ ಅದನ್ನ ತಿರಸ್ಕರಿಸಿದ್ದಾನೆ ಅನ್ನೋದಕ್ಕೆ ಇದೆ ಸಾಕ್ಷಿ, ಭಗವಂತ ಏನೆ ಕೊಟ್ರು ಸ್ವಲ್ಪ ಲೇಟು, ಆದ್ರೆ ಕೊಡೋದನ್ನ ಮಾತ್ರ ಸರಿಯಾಗೇ ಕೊಡ್ತಾನೆ ಅನ್ನೋದಕ್ಕೆ ಇದೆ ಸಾಕ್ಷಿ.

  ReplyDelete
 13. Papada duddu punyada kelaskadaru use madali punaha thirugisidare thiruga yavdadaru ketta kelasakke use agabahudu.

  ReplyDelete
 14. ಅನ್ಯಾಯದ ಹಣದ ಕಾಣಿಕೆ ಬೇಡ ಅ೦ತ ಏನಾದರೂ ನಿರ್ಧಾರವಾದರೆ....ಮತ್ತೆ ಆ ಮೂರು ನಾಮವೇ ಗತಿ .....ಹರಿ ಹರೀ...ತಿಮ್ಮಪ್ಪನಿಗೆ ಈಗ ನಿಜವಾದ ಧರ್ಮಸ೦ಕಟ.....

  ReplyDelete
 15. ಪ್ರೀತಿಯ ಗುರುಗಳೇ... ನಿಮ್ಮ ಮಾತು ನನಗೆ ಇಷ್ಟ ಆಯಿತು... ದೇವರ ಅಸ್ತಿತ್ವ ಸತ್ಯವಾಗಿದ್ದರೆ ರೆಡ್ಡಿ ಜೈಲು ಪಾಲಾಗುತ್ತಿರಲಿಲ್ಲ. ಯಾಕೆಂದರೆ ಅವನು ಪರಮ ದೈವ ಭಕ್ತ. ಭೂತಾಯಿ ಗರ್ಭ ಬಗೆದು ದೇವರ ಮುಂದೆ ನಿಂತು ಪಾಪವನ್ನೆಲ್ಲ ಒಪ್ಪಿಸಿಬಿಡುತ್ತಿದ್ದ. ನಾನು ಮೂರ್ತಿ ಪೂಜೆ ಒಪ್ಪುವುದಿಲ್ಲ, ಪ್ರಪಂಚದ ಸಮತೋಲನಕ್ಕೆ ಯಾವುದೋ ಒಂದು ಶಕ್ತಿ ಕಾರಣವಾಗಿದೆ. ನಾನು ಆ ಶಕ್ತಿಯನ್ನೇ ದೇವರು ಎಂದು ಕೊಳ್ಳುತ್ತೇನೆ. ಪ್ರತಿ ವಸ್ತುವಿನಲ್ಲಿ ಅದನ್ನು ಕಂಡು ಖುಷಿಪಡುತ್ತೇನೆ. ಆ ಶಕ್ತಿ ತಲೆ ಮೇಲಿಂದ ಹಿಡಿದು, ಪಾದದ ಕೆಳಗೂ ಇದೆ, ಎಲ್ಲೆಲ್ಲು ಬಂದಿತವಾಗಿದೆ ಎಂದುಕೊಳ್ಳುತ್ತೇನೆ. ಕಷ್ಟ ಸುಖ ನಾವು ಮಾಡಿಕೊಳ್ಳುವಂತದ್ದು. ದೇವರನ್ನು ಪೂಜೆ ಮಾಡುವ ಪೂಜಾರಿಯು ಹೊಟ್ಟೆಪಾಡಿಗಾಗಿಯೇ ಆ ಕೆಲಸ ಮಾಡುತ್ತಿರುತ್ತಾನೆ. ದುಡ್ಡು ಇಲ್ಲದೆ ಕೆಲವು ಪೂಜೆಗಳು ನಡೆಯುವುದಿಲ್ಲ. ಇನ್ನೊಬ್ಬರ ಭವಿಷ್ಯ ಹೇಳುವ ಜೋತಿಷಿಗೆ ತಾನೇ ಅತಂತ್ರ ಎಂಬುದು ಗೊತ್ತಿರುವುದಿಲ್ಲ. ಯಾವುದೇ ಊರು ಕೇರಿ ತೆಗೆದುಕೊಂಡರು ಹೆಚ್ಚು ಭಿಕ್ಷುಕರು ಕಾಣುವುದು ದೇವಸ್ಥಾನದ ಮುಂದೆ. ನಾನು ದೇವರ ಸ್ವರೂಪ ಎಂದ ವ್ಯಕ್ತಿಯ ಮನೆಯೊಳಗೇ ಇತ್ತೀಚೆಗೆ ಕೋಟಿ ಕೋಟಿ ಕಪ್ಪು ಹಣ ದೊರಕಿತು. ನಮ್ಮ ಜೀವನ ಮಾನಸಿಕ ಸಮತೋಲನದ ಮೂಲಕ ಕಾಯ್ದುಕೊಳ್ಳಬೇಕು. ಯಾರು ಯಾರನ್ನು ಕಾಯುವುದಿಲ್ಲ ಎಂದಂದುಕೊಂಡು ಉತ್ತುಂಗಕ್ಕೇರಬೇಕು. ನಿಮ್ಮ ಮಾತಿಗೆ ಧನ್ಯವಾದ ಗುರುಗಳೇ... Ravi Murna

  ReplyDelete
 16. Shiva Kumar MayigowdaSaturday, 10 September, 2011

  ನಮ್ಮ ದೇಶದ ಹೆಚ್ಜಿನ ಶ್ರೀಮಂತ ದೇವಸ್ಥಾನಗಳ ಆದಾಯಗಳೆಲ್ಲಾ ಇಂತಾ ಅನ್ಯಾಯದ ಸಂಪಾದನೆಗಳು.ಇಂತಾ ಆದಾಯ ನಿಲ್ಲಿಸಿದರೆ,ದೇವರೇ ಬಡವನಾಗೋ ಅಪಾಯ ಇದೆ!

  ReplyDelete
 17. ಶಿವಕುಮಾರ್ ದೇವರು ಪರಮಶಕ್ತನು. ಕರುನಾಮಹಿಯು,ಪ್ರತಿಯೊಂದು ಇರುವವನು ಪ್ರತಿಯೊಂದನ್ನು ಕೊಡುವವನು ಆಗಿರುಹುದರಿಂದ ಅವನೆಂದು ಬಡವನಾಗುವದಿಲ್ಲ.ದೇವರ ಕಾಯ ಕಲಾಪದ ಅರಿವಿಲ್ಲದೆ ಮಾತನಾಡಬೇಡಿ ಅವನು ಶಕ್ತಿಯಲ್ಲದ ಶಕ್ತಿ .

  ReplyDelete
 18. Shiva Kumar MayigowdaSaturday, 10 September, 2011

  ನೋವಾಗಿದ್ದರೆ ಕ್ಷಮೆಯಿರಲಿ.ದೇವರ ಹೆಸರಲ್ಲಿ ಅಕ್ರಮ ನಡಿಬಾರದು ಅಂದೆ ಅಷ್ಟೆ. ಇಂದು ಮಠಗಳು,ಆಶ್ರಮಗಳು,ದೇವಸ್ಥಾನಗಳು ಮತ್ತು ಧಾರ್ಮಿಕ ಸಂಸ್ಥೆಗಳು ಕಪ್ಪುಹಣ ಮುಚ್ಚಿಡುವ ಜಾಗವಾಗಿದೆಯಲ್ಲವಾ?

  ReplyDelete
 19. ದೇವರು ಎಲ್ಲ ಕಡೆ ಇರುತ್ತಾನೆ. ದೇವಸ್ಥಾನದ ಶುಚಿತ್ವ, ಪಾವಿತ್ರ್ಯತೆ, ಹೂ ಗಂಧದ ಪರಿಮಳ ಮತ್ತು ಘಂಟೆಗಳ ನಿನಾದದಿಂದ ದೇವಸ್ಥಾನದಲ್ಲಿ ದೇವನಿರುವನೆಂದು ಭಾಸವಾಗುತ್ತದೆ. ಆದುದರಿಂದ ಅವನನ್ನು ಬಡವ ಎಂದರೆ ಬಡವ, ಸಿರಿವಂತ ಎಂದರೆ ಸಿರಿವಂತ. ಪ್ರಪಂಚವನ್ನು ಯಾವುದೋ ಸಮತೋಲನಕ್ಕೆ ಬಿಟ್ಟು ಹೋಗಿದ್ದಾನೆ. ಆ ಸಮತೋಲನ ಕಾಯ್ದುಕೊಳ್ಳದಿದ್ದಲ್ಲಿ ಮೀಸೆ ತೀರುವಿ ಮೆರೆದ ರೆಡ್ಡಿಯಂತವರು ಸಾವಿರ ಜನ ಬಂದರು ಜೈಲು ಪಾಲಾಗಬೇಕಾಗುತ್ತದೆ. ಆಗ ಯಾವ ಕಿರೀಟವು ಸಹಾಯಕ್ಕೆ ಬರದು. ಅವನು ಎಂದು ಕಿರೀಟ ಕೇಳಲಿಲ್ಲ. ಅದು ಕೊಟ್ಟವನ ಮತ್ತು ಪಡೆದುಕೊಂಡ ತಿರುಪತಿಯವರ ನಡುವೆ ಇದ್ದ ಏನೋ ಒಂದು ಗಂಟು

  ReplyDelete
 20. ನಮ್ಮ ದೇಶದಲ್ಲಿ ಈ ದೇವಾಲಯಗಳು , ಮಠಗಳು, ಮಸೀದಿಗಳು, ಚರ್ಚಗಳು ಇತ್ಯಾದಿ ತಾವು ಏನು ಮಾಡಬೇಕಿತ್ತೋ ಅದನ್ನು ಮಾಡದೆ ಇತರೆ ತರಲೆ ಕೆಲಸಗಳಲ್ಲಿ ಮುಳುಗಿವೆ. ಎಲ್ಲೋ ಕೆಲವೇ ಕೆಲವು ಅಪವಾದಗಳು ಇರಬಹುದು ...ಇಂದು ರಾಜಕೀಯವನ್ನು ಮಾಡದೆ ಇರುವ ಧಾರ್ಮಿಕ ನಾಯಕರೇ ಅಪರೂಪ. ಕಳ್ಳ ಹಣ ರಕ್ಷಿಸುವ ಇನ್ನೊಂದು ಭಯಾನಕ ದಂಧೆ ನಮ್ಮ ದೇಶದ ದಾರಿ ತಪ್ಪಿಸುತ್ತಿದೆ. ಹಾಗಾಗಿ ಎಲ್ಲ ಧಾರ್ಮಿಕ ಕೇಂದ್ರಗಳ ಸಂಪತ್ತಿನ ಮೇಲೂ ಆದಾಯ ತೆರಿಗೆ ಹಾಕಬಹುದೇನೋ ..ಅಥವಾ ಅವುಗಳ ಸಂಪತ್ತನ್ನು ರಾಷ್ಟ್ರ ಕಲ್ಯಾಣಕ್ಕಾಗಿ ಉಪಯೋಗಿಸಿಕೊಳ್ಳುವತ್ತ ಗಮನ ಹರಿಸಬೇಕಾಗಿದೆ.

  ReplyDelete