• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಇವರಿಗೆ ಕೊಂಚವೂ ಮುಜುಗರ ಆಗುವುದಿಲ್ಲವೆ..?

ಅನೇಕ ಆಪಾದನೆಗಳ ಹಿನ್ನೆಲೆಯಲ್ಲಿ ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಮತ್ತು ಓ.ಎಂ.ಸಿ. ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ರೆಡ್ಡಿ ಬಂಧಿತರಾಗಿದ್ದಾರೆ. ಗಣಿಗಾರಿಕೆ ಕ್ಷೇತ್ರದಲ್ಲಿ ಅಪರಾಧ ಸಂಚು, ವಂಚನೆ, ಕಳ್ಳತನ, ಭ್ರಷ್ಟಾಚಾರ, ಅಕ್ರಮ ಗಣಿಗಾರಿಕೆ, ಅಂತರಾಜ್ಯ ಗಡಿ ಒತ್ತುವರಿ  ಆರೋಪಗಳ ಮೇಲೆ ಸಿ.ಬಿ.ಐ.  ಭಾರತೀಯ ಅಪರಾಧ ದಂಡ ಸಂಹಿತೆ, ಭ್ರಷ್ಟಾಚಾರ ನಿಗ್ರಹ ಕಾನೂನು, ಭಾರತೀಯ ಅರಣ್ಯ ಕಾಯಿದೆ ಮತ್ತು ಖನಿಜ ನಿಯಂತ್ರಣ ಕಾಯಿದೆಗಳ ಅನುಸಾರ ಮೊಕದ್ದಮೆಗಳನ್ನು ಹೂಡಿದೆ. ಇವರನ್ನು ಆರೆಸ್ಟ್ ಮಾಡುವುದಕ್ಕೂ ಮುನ್ನ ಸುದೀರ್ಘ ತನಿಖೆಯಾಗಿದೆ. ಸಾಕಷ್ಟು ಸಾಕ್ಷ್ಯಾಧಾರ ಸಂಗ್ರಹಿಸಿದ ಬಳಿಕವೇ ಇಂಥ ಪ್ರಮುಖ ಹೆಜ್ಜೆ ಇಡಲಾಗಿದೆ. ಆಂಧ್ರ ನ್ಯಾಯಾಲಯ ಇವರಿಬ್ಬರನ್ನೂ ಜೈಲಿಗೆ ಕಳುಹಿಸಿದೆ. ( ನ್ಯಾಯಾಂಗ ಬಂಧನ). ಇತ್ತ ಕರ್ನಾಟಕದಲ್ಲಿ ಕೂಡ ಲೋಕಾಯುಕ್ತ ವರದಿ ರೆಡ್ಡಿ ಬ್ರದರ್ಸ್ ಮತ್ತು ಶ್ರೀರಾಮುಲು ಅವರತ್ತ ಬೆರಳು ತೋರಿಸಿದೆ. ಆದರೂ ಮೌಲ್ಯಾಧಾರಿತ ರಾಜಕಾರಣ ಮಾಡುತ್ತೇವೆ-ಶಿಸ್ತಿನ ಪಕ್ಷ ಎಂದೆಲ್ಲ ಹೇಳಿಕೊಳ್ಳುವ ಬಿ.ಜೆ.ಪಿ. ಪ್ರಮುಖರು ಈ ಸಂದರ್ಭದಲ್ಲಿ ಆಡಿದ ಮಾತುಗಳನ್ನು ಕೇಳಿದಾಗ ಅನಿಸುವುದು, ಇವರಿಗೆ ಕೊಂಚವೂ ಮುಜುಗರ ಆಗುವುದಿಲ್ಲವೆ...?
ಸಿಬಿಐ ಬಂಧನದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ
ನಾಡಿನ ಮುಖವಾಣಿ ಎನಿಸಿಕೊಳ್ಳುವ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿರುವ ಡಿ.ವಿ. ಸದಾನಂದ ಗೌಡ ಅವರೇಳಿರುವುದು ' ಕಾಂಗ್ರೆಸ್ ಪಕ್ಷ ಸಿಬಿಐ ಅನ್ನು  ದುರ್ಬಳಕೆ ಮಾಡಿಕೊಳ್ಳುತ್ತಿದೆ. ರೆಡ್ಡಿ ಬಂಧನ ರಾಜಕೀಯ ಪ್ರೇರಿತ' ರಾಜ್ಯದ ಕಾನೂನು-ಸುವ್ಯವಸ್ಥೆ ಹೊಣೆ ಹೊತ್ತ ಗೃಹ ಸಚಿವ ಆರ್. ಅಶೋಕ್  'ಕೇಂದ್ರ ಯುಪಿಎ ಸರಕಾರ ದಮನಕಾರಿ ಆಡಳಿತ ನಡೆಸುತ್ತಿದೆ. ಸಿಬಿಐ, ಕೇಂದ್ರದ ಕೈಗೊಂಬೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ'  ಬಂಧಿಸುವುದಕ್ಕೂ ಮುನ್ನ ನೋಟಿಸ್ ನೀಡಬೇಕಿತ್ತು' ( ಆರೆಸ್ಟ್ ಮಾಡುವಾಗ ನೋಟಿಸ್ ಕೊಟ್ಟು ಹೋಗುತ್ತಾರೆಯೆ ಎಂದು ಒಮ್ಮೆ ಪೊಲೀಸರನ್ನು ಕೇಳಿ ಸಚಿವರೆ) ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ' ಸಿಬಿಐ ಕ್ರಮ ರಾಜಕೀಯ ಪ್ರೇರಿತ. ಸಿಬಿಐ ಬಗ್ಗೆ ನಮಗೆ ವಿಶ್ವಾಸವಿಲ್ಲ. ಆದ್ದರಿಂದಲೇ ನಾವು ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಯಾವುದೇ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವಹಿಸುವುದಿಲ್ಲ' ( ಬಿಜೆಪಿ ನೇತೃತ್ವದ ಎನ್.ಡಿ.ಎ. ಕೂಡ ಆರು ವರ್ಷ ಈ ದೇಶವನ್ನಾಳಿತು. ಆಗಲೂ ನೀವು ಇದೇ ಮಾತು ಹೇಳುತ್ತಿದ್ದಿರ..? ಹಾಗಿದ್ದರೆ ನೀವು ಬಿಜೆಪಿಯವರು ಸಿಬಿಐ ಅನ್ನು ಯಾಕೆ ವಿಸರ್ಜಿಸಲಿಲ್ಲ. ಉತ್ತರಿಸುತ್ತೀರಾ..?) ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ' ಇದರ ಹಿಂದೆ ಕಾಂಗ್ರೆಸಿನ ರಾಜಕೀಯ ದುರುದ್ದೇಶವಿದೆ. ಸಿಬಿಐ ಅನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ'  ಸಚಿವ ಜಗದೀಶ್ ಶೆಟ್ಟರ್ ' ಸಿಬಿಐ ಕಾಂಗ್ರೆಸ್ ಏಜೆಂಟ್. ಈ ಬಂಧನದ ಹಿಂದೆ ರಾಜಕೀಯ ಪಿತೂರಿಯಿದೆ'  ಶಾಸಕ ಸಿ.ಟಿ.ರವಿ ' ಬಿಜೆಪಿಯನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿರುವುದು ಜನಜನಿತ ಸತ್ಯ' ಇನ್ನು ಮಾಜಿ ಸಚಿವ ಶ್ರೀರಾಮುಲು ಹೇಳಿದ್ದು ' ಆರೆಸ್ಟ್ ಮಾಡುವುದಕ್ಕೆ ಮೊದಲು ನೋಟಿಸ್ ಕೊಟ್ಟು ಬರಬೇಕಿತ್ತು. ಸಿಬಿಐ, ಕಾಂಗ್ರೆಸಿನ ಏಜೆಂಟ್. ಕಾಂಗ್ರೆಸ್ ಬಚಾವೋ ಸಂಸ್ಥೆ !
ಮುಖ್ಯಮಂತ್ರಿ ಸದಾನಂದ ಗೌಡ
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ
ಸಚಿವ ಆರ್. ಅಶೋಕ್
ಸಚಿವ ಜಗದೀಶ್ ಶೆಟ್ಟರ್
ಬಿಜೆಪಿ ರಾಜ್ಯಧ್ಯಕ್ಷ ಕೆ.ಎಸ್. ಈಶ್ವರಪ್ಪ

ಶಾಸಕ ಮತ್ತು ರಾಜ್ಯ ಬಿಜೆಪಿ ವಕ್ತಾರ ಸಿ.ಟಿ.ರವಿ

ಈ ಮಾತುಗಳನ್ನು ಹೇಳುವುದಕ್ಕೆ ಮೊದಲು ರಾಜ್ಯದ ಬಿಜೆಪಿ ನೇತೃತ್ವದ ಸರಕಾರವೇ ನೀಡಿದ ಪ್ರಕರಣಗಳ ತನಿಖೆ ಮಾಡಿದ ಲೋಕಾಯುಕ್ತ ಸಂಸ್ಥೆ ಸಹ ಸಿಬಿಐ F.I.R. ನಲ್ಲಿರುವಂಥ ಅಂಶಗಳನ್ನೂ ಒಳಗೊಂಡ ಬೃಹತ್ ವರದಿ ನೀಡಿದೆ ಎಂಬುದನ್ನು ಮರೆತರೇಕೆ..? ಇಂಥ ಜಾಣ ಮರೆವು ಯಾಕಾಗಿ.... ಇಂಥ ಹೇಳಿಕೆಗಳನ್ನು ಗಮನಿಸಿದ ಜನತೆ ಏನೆಂದುಕೊಳ್ಳಬಹುದು ಎಂಬ ಅಂಜಿಕೆಯೆ ಇವರಿಗಿಲ್ಲವೆ...?
ಬಂಧನದ ಸಂದರ್ಭದಲ್ಲಿ ಜೆ. ರೆಡ್ಡಿ ಹಿಂದಿರುವ ಶ್ರೀನಿವಾಸ ರೆಡ್ಡಿ
 ನಾನು ಬಳ್ಳಾರಿಯಲ್ಲಿ ವರದಿಗಾರನಾಗಿ ಕೆಲಸ ಮಾಡಿದ್ದೇನೆ. ಗಡಿ ಒತ್ತುವರಿ-ಅಕ್ರಮ ಗಣಿಗಾರಿಕೆ ಕುರಿತು ಸತತವಾಗಿ ವಿಶೇಷ ವರದಿಗಳನ್ನು ಮಾಡಿದ್ದೇನೆ. ಈ ಹಿನ್ನೆಲೆಯಲ್ಲಿ ಗೂಂಡಾಗಳಿಂದ ಹಾಡು ಹಗಲೇ ಹಲ್ಲೆಗಳಿಗೂ ಒಳಗಾಗಿದ್ದೇನೆ. ಸತ್ಯಾಂಶ ಏನೆಂದು ನನಗೆ ಚೆನ್ನಾಗಿ ಗೊತ್ತಿದೆ. ಬಳ್ಳಾರಿ ಕಾಯ್ದಿಟ್ಟ ಅರಣ್ಯದಲ್ಲಿ ಮೈಲಿಗಟ್ಟಲೆ ನಡೆದಾಡಿರುವ ನನಗೆ ಅಲ್ಲಿದ್ದ ಅಂತರಾಜ್ಯ ಗಡಿ ಗುರುತು ನಾಶವಾಗಿರುವುದರ ಬಗ್ಗೆ ಅರಿವಿದೆ. ಇದರ ವಿಡಿಯೋ ಚಿತ್ರೀಕರಣ ಮತ್ತು  ವರದಿ ನೀಡಿದ್ದೇನೆ.

ಇನ್ನು ಮುಖ್ಯವಾಗಿ ಸಿ.ಬಿ.ಐ. ಸಂಸ್ಥೆ ಬಗ್ಗೆ ಮಾತನಾಡೋಣ. ಜಗತ್ತಿನ ಕೆಲವೇ ಕೆಲವು ಅತ್ಯುತ್ತಮ ತನಿಖಾ ಸಂಸ್ಥೆಗಳಲ್ಲಿ ಸಿ.ಬಿ.ಐ. ಕೂಡ ಹೌದು. ಅಂತರಾಷ್ಟ್ರೀಯ ಪೊಲೀಸ್ ಸಮುದಾಯದಲ್ಲಿಯೂ ಇದರ ಹೆಗ್ಗಳಿಕೆಯಿದೆ. ಭಾರಿ ಗೌರವದಿಂದ ಇದನ್ನು ಕಾಣಲಾಗುತ್ತದೆ. ಪತ್ರಿಕೋದ್ಯಮದಂತೆ ಅಪರಾಧ ಶಾಸ್ತ್ರವನ್ನು ಅಧ್ಯಯನ ಮಾಡಿರುವ ಹಿನ್ನೆಲೆಯಲ್ಲಿ ಈ ಮಾತು ಹೇಳುತ್ತಿದ್ದೇನೆ. ಇಂಥ ಸಂಸ್ಥೆ ಬಗ್ಗೆ ನಾಡನ್ನಾಳುವ ಪ್ರಮುಖರು ಸಲ್ಲದ ಆರೋಪಗಳನ್ನು ಮಾಡುವುದು ಎಷ್ಟು ಸರಿ...?

ಒಂದು ವೇಳೆ ಬಿಜೆಪಿ ಪ್ರಮುಖರು ಹೇಳುವ ಮಾತುಗಳಲ್ಲಿ ಸತ್ಯಾಂಶವಿದ್ದರೆ ಇದರ ದಾಖಲೆಗಳನ್ನು ವಿಧಾನ ಸಭೆಯಲ್ಲಿ-ಸಂಸತ್ತಿನಲ್ಲಿ ಏಕೆ ತೋರಿಸಿಲ್ಲ. ನ್ಯಾಯಾಲಯಗಳಲ್ಲಿ ಏಕೆ ಖಾಸಗಿ ಮೊಕದ್ದಮೆಗಳನ್ನು ಹೂಡಲಿಲ್ಲ..? ಈ ಪ್ರಶ್ನೆಗೆ ಉತ್ತರ ಹೇಳುವರೆ...? ಜನತೆ ಈಗ ಎಚ್ಚೆತ್ತುಕೊಂಡಿದ್ದಾರೆ. ರಾಜಕಾರಣಿಗಳ ನಡೆ-ಮಾತಿನಲ್ಲಿ ಎಷ್ಟು ಹುರುಳಿದೆ ಎಂಬುದನ್ನು ವಿಮರ್ಶಿಸಬಲ್ಲರು ಎಂಬುದನ್ನು ಇವರ್ಯಾಕೆ ಅರಿಯುತ್ತಿಲ್ಲ. ಏನೇ ಮಾತನಾಡಿದರೂ 'ಚಲ್ತಾ ಹೈ' ಎಂಬ ಭಾವವೆ...?

12 comments:

 1. ನಿಜ ನಿಮ್ ಮಾತು ಇವೊತ್ತು ಏನಾಗಿದೆ ಅಂತಂದರೆ ರಾಜಕೀಯ ಮಾಡೋರು ಏನು ಬೇಕಾದರೂ ಮಾಡಬಹುದು ಹಾಗೆ ಮಾಡಿದರೆ ಚಲ್ತಾ ಹೈ...ಭಾವನೆ ಆಳವಾಗಿ ಬೇರೂರಿದೆ. ಲೋಕಾಯುಕ್ತ/ಸಿಬಿಐ ಗಳೆಲ್ಲವೂ ಅವರವರ ಮೂಗಿನ ನೇರಕ್ಕೆ ನಡೆಯಬೇಕು ಅಂದ್ಕೊತಾರೆ ಇಲ್ಲದಿದ್ದರೆ ಅವುಗಳಲ್ಲಿ ನಂಬಿಕೆ ಇಲ್ಲ ಅನ್ನೋ ಅದೇ ಕಿತ್ತುಹೋಗಿರೋ ಡೈಲಾಗು..! ಇನ್ನು ಈ ಸಂಸ್ಥೆಗಳ ಪ್ರಾಮಾಣಿಕತೆ ಬಗ್ಗೆ ಮಾತನಾಡದೇ ಇರೋದೇ ಲೇಸು. ಯಾಕೆಂದರೆ "ಹೊರಿಸಿಕೊಂಡು ಹೋದ ನಾಯಿ ಮೊಲನೇನು ಕೊಲುವುದು.." ಅನ್ನೊ ಬಸವೇಶ್ವರರ ವಚನ ಹೇಳಿದರೆ ಸಾಕಿತ್ತಪ್ಪ...!

  ReplyDelete
 2. Maadidunno maharaya...

  ReplyDelete
 3. ಅವಿನಾಶ ಕನ್ನಮ್ಮನವರTuesday, 06 September, 2011

  ಯಾರೋ ಹೇಳಿದ ನೆನಪು, ಕಾನೂನು ಸ್ವಲ್ಪ ತಡವಾಗಬಹುದು ಆದರೆ, ಕಾನೂನಿನ ಕೈಗಳು ಬಹಳಾ ಉದ್ದ ಮತ್ತು ನಿಖರ.

  ReplyDelete
 4. A very thought provoking article..

  great

  ReplyDelete
 5. ಒಡಲಾಳದ ಮಾತು...., ಎಲ್ಲರಿಗೂ ರೆಡ್ಡಿ ಪುರಾಣ ಗೊತ್ತಿರೋ ವಿಚಾರನೇ....ಎಲ್ಲಾ ಕರ್ನಾಟಕ ಜನರ ಅಂಬೋಣ ಇದೆ ಆಗಿದೆ.

  ಇದರ ಮಧ್ಯೆ ಸಾಮಾನ್ಯ ಮಧ್ಯಮ ವರ್ಗದವರಾದ ನಮ್ಮಂಥವರಿಗೆ ಕಾನೂನು, ಕೋರ್ಟುಗಳು ಚುರುಕಾಗಿವೆ ಅನ್ನೋದು ಹಾಲು ಕುಡಿದಸ್ಟು ಸಂತಸ ತಂದಿದೆ.

  ReplyDelete
 6. kumar nimma abhipraya sariyagide. 3 bittoru.....!

  ReplyDelete
 7. ಎಲ್ಲ ಸರಿ .. ಒಪ್ಪುವಂಥ ಲೇಖನ.. ಆದರೆ ಇ ಕಾಮೆಂಟ್ ನಲ್ಲಿ ಅಷ್ಟು ಅರ್ಥ ಇಲ್ಲ ಅನ್ನಿಸ್ತು ..
  "ಸಿಬಿಐ ಬಗ್ಗೆ ನಮಗೆ ವಿಶ್ವಾಸವಿಲ್ಲ. ಆದ್ದರಿಂದಲೇ ನಾವು ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಯಾವುದೇ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವಹಿಸುವುದಿಲ್ಲ' ( ಬಿಜೆಪಿ ನೇತೃತ್ವದ ಎನ್.ಡಿ.ಎ. ಕೂಡ ಆರು ವರ್ಷ ಈ ದೇಶವನ್ನಾಳಿತು. ಆಗಲೂ ನೀವು ಇದೇ ಮಾತು ಹೇಳುತ್ತಿದ್ದಿರ..? ಹಾಗಿದ್ದರೆ ನೀವು ಬಿಜೆಪಿಯವರು ಸಿಬಿಐ ಅನ್ನು ಯಾಕೆ ವಿಸರ್ಜಿಸಲಿಲ್ಲ. ಉತ್ತರಿಸುತ್ತೀರಾ..?)"
  "ಇದೇ ಮಾತು ಹೇಳುತ್ತಿದ್ದಿರ"... May be possible.. its imaginary..cannot comment this way.. then it becomes your personal opinion.
  "ಸಿಬಿಐ ಅನ್ನು ಯಾಕೆ ವಿಸರ್ಜಿಸಲಿಲ್ಲ" because, during their time, General perception & opinion about CBI was it is not under anyone's control. And by the way, did they claim that during their period CBI was under their control? No, never. Therefore I ask you, is this whole sentence makes meaningful / sense? .. For me, no !

  ReplyDelete
 8. @ 7ನೇ ಕಾಮೆಂಟ್; ನೀವು ನಿಮ್ಮ ಹೆಸರಿನೊಂದಿಗೆ ಕಾಮೆಂಟ್ ಮಾಡಿದ್ದರೆ ಹೆಚ್ಚು ಖುಷಿಯಾಗುತ್ತಿತ್ತು. ನಮ್ಮ ನಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹೇಳಿಕೊಳ್ಳೋಣ. ಮೊದಲನೆಯದಾಗಿ ನೀವು ನನ್ನ ಭಾವವನ್ನು ಸರಿಯಾಗಿ ಅರ್ಥಮಾಡಿಕೊಂಡಿಲ್ಲ. ಸಿಬಿಐ ಅನ್ನು ವಿಸರ್ಜಿಸುವುದು ಅಷ್ಟು ಸುಲಭ ಸಾಧ್ಯವಿಲ್ಲ. ಆದರೆ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತ್ತಿದಂತ ವ್ಯಕ್ತಿ 'ಸಿಬಿಐ ಬಗ್ಗೆ ನಮಗೆ ವಿಶ್ವಾಸವಿಲ್ಲ. ಆದ್ದರಿಂದಲೇ ನಾವು ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಯಾವುದೇ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವಹಿಸುವುದಿಲ್ಲ' ಎಂದಾಗ ಇನ್ಯಾವ ರೀತಿಯ ಪ್ರಶ್ನೆ ಕೇಳಬೇಕಿತ್ತು ನೀವೇ ಹೇಳಿ. ಸಿಬಿಐ ಕಾರ್ಯ ವೈಖರಿಯ ಬಗ್ಗೆ ಸಮಾಧಾನವಿಲ್ಲದಿದ್ದರೆ ಎನ್.ಡಿ.ಎ. ಕಾಲಾವಧಿಯಲ್ಲಿ ಅದರ ಸ್ವರೂಪ-ನೀತಿ ಬದಲಾಯಿಸುವುದೇನೂ ಕಷ್ಟವಾಗಿರಲಿಲ್ಲ. ಅವರು ಹೀಗೆ ಮಾಡಲಿಲ್ಲವೆಂದರೆ ಮೂಲಭೂತವಾಗಿ ಆ ತನಿಖಾ ಸಂಸ್ಥೆಯ ರಚನೆ ಸಮರ್ಪಕವಾಗಿದೆಯೆಂದೆ ಅರ್ಥ. ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಇಂಥ ಸಂಸ್ಥೆಗಳ ಬಗ್ಗೆ ಒಂದು ಮಾತನಾಡದೇ ಇಳಿದ ಮೇಲೆ ವಿಶ್ವಾಸವಿಲ್ಲ ಎಂದು ಹೇಳುವುದು ಸರಿಯೆ..? ಆದ್ದರಿಂದ ನಾನು ಅರ್ಥಪೂರ್ಣವಾಗಿ ಮತ್ತು ಸೆನ್ಸಿಬಲ್ ಆಗಿ ಪ್ರಶ್ನೆ ಕೇಳಿದ್ದೇನೆ. ಈ ಪ್ರಶ್ನೆಯ ಹಿಂದಿನ ಭಾವ ಅರ್ಥೈಸಿಕೊಳ್ಳುವುದು ಅಗತ್ಯ ಅಷ್ಟೆ...

  ReplyDelete
 9. naadina olle bhavishya kantha ide. CBI yaavude ottadakke maniyade kelsa madidre saaku.

  ReplyDelete
 10. ivaru maatraa alla... yava pakshadavaru sacha heli. yella onde boat nalli prayanisuva haramkor galu... bithaaki navu neevu yenu madoke agalla, namma life ishtene....

  ReplyDelete
 11. ಹೆ ಹೆ ... ಮೂರು ಬಿಟ್ಟವರು ದೇವರಿಗೂ ದೊಡ್ಡವರು .. ಗಾದೆ ಮಾತು ಕೇಳಿಲ್ಲವೇ.. ಅದೆಲ್ಲ ಬಿಟ್ಟ ಮೇಲೆ ರಾಜಕಾರಣಕ್ಕಿಳಿಯೋದು."

  ReplyDelete
 12. Prashant Kini , KarnatakaWednesday, 07 September, 2011

  ಮಾನ ಇದ್ರೆ ತಾನೇ ಮರ್ಯಾದೆ ಹೋಗೋಕೆ, ಮುಜುಗರ ಆಗೋಕೆ ...!!

  ReplyDelete