• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಪದ್ಮನಾಭ ದೇಗುಲ; ಅಪೂರ್ವ ವಾಸ್ತುಶಿಲ್ಪ-ಅಗಣಿತ ಸಂಪತ್ತು


ಕೇರಳ ರಾಜಧಾನಿ ತಿರುವನಂತಪುರದಲ್ಲಿರುವ ತಿರು ಅನಂತ ಪದ್ಮನಾಭ ದೇಗುಲ ತನ್ನ ಒಡಲೊಳಗೆ ಇರಿಸಿಕೊಂಡ ಅಗಣಿತ ಸಂಪತ್ತಿನಿಂದಾಗಿ ರಾಷ್ಟ್ರದ ಗಮನ ಸೆಳೆದಿದೆ. ಅತ್ಯಪೂರ್ವವಾದ ಈ ದೇಗುಲದ ಮೂಲ ಸ್ಥಾಪಕರು ಯಾರು…? ದೇಗುಲ ದಾಖಲೆಗಳ ‘ಗ್ರಂಥಾವಳಿ’ ಮತ್ತು ‘ಅನಂತಶಯನ ಮಹಾತ್ಮೆ’ ಗ್ರಂಥದ ಪ್ರಕಾರ ತುಳುನಾಡಿನ (ಕರ್ನಾಟಕದ ಮಂಗಳೂರು ಸೀಮೆ) ದಿವಾಕರ ಮುನಿ….!

ಯಾತ್ರೆ ಮಾಡುತ್ತಾ ಕಠಿಣ ತಪ್ಪಸ್ಸನ್ನೂ ಆಚರಿಸುತ್ತಿದ್ದ ಮುನಿ ತನ್ನ ಆರಾಧ್ಯ ದೈವ ವಿಷ್ಣುವನ್ನು ಒಲಿಸಿಕೊಳ್ಳುವ-ದೇವನಿಗಾಗಿ ದೇಗುಲ ನಿರ್ಮಿಸುವ ಕಥೆ ಸ್ವಾರಸ್ಯಕರ. ವಿಳ್ವಮಂಗಳಾತು ಸ್ವಾಮಿಯರ್ ಅವರ ಪ್ರಕಾರ ನಂಬೂದರಿ ಸಮುದಾಯಕ್ಕೆ ಸೇರಿದ ವಿಷ್ಣು ಭಕ್ತನಿಂದ ಮೂಲ ಗುಡಿ ನಿರ್ಮಾಣವಾಗಿದೆ. ಕೇರಳದ ನಂಬೂದರಿಗಳು ತುಳುನಾಡಿನ ಮೂಲದವರು ಎಂಬ ವಾದವಿದೆ. ಈ ಹಿನ್ನೆಲೆಯಲ್ಲಿ ವಿಳ್ವಮಂಗಳಾತು ಅವರ ಅಭಿಪ್ರಾಯ ಕೂಡ ದಿವಾಕರ ಮುನಿ ಅವರಿಂದಲೇ ಮೂಲ ವಿಗ್ರಹ-ದೇಗುಲ ಪ್ರತಿಷ್ಠಾಪನೆಯಾಗಿದೆ ಎಂಬುದಕ್ಕೆ ಪುಷ್ಟಿ ನೀಡುತ್ತದೆ. ಶತಶತಮಾನಗಳಿಂದಲೂ ಈ ದೇಗುಲದಲ್ಲಿ ತುಳುನಾಡಿನವರು ಅರ್ಚಕರಾಗಿದ್ದಾರೆ. ಪ್ರಸ್ತುತ ದಿನದಲ್ಲಿಯೂ ಇವರ ಪ್ರಾಬಲ್ಯವಿದೆ. ಮತ್ತೊಂದು ಕುತೂಹಲಕರ ಸಂಗತಿಯೆಂದರೆ ವಿಳ್ವಮಂಗಳಾತು ಸ್ವಾಮಿಯರ್ ಅವರ ಮಂಟಪದ ಸನಿಹವೇ ಶ್ರೀಕೃಷ್ಣನ ದೇಗುಲವಿದೆ  ಲಭ್ಯವಿರುವ ದಾಖಲಾತಿಗಳ ಪ್ರಕಾರ  ಮಹಾವಿಷ್ಣುವಿನ ಮೂರ್ತಿ ಪ್ರತಿಷ್ಠಾಪನೆಗೊಳ್ಳುವ ಬಹು ಮುಂಚೆಯೇ ಶ್ರೀಕೃಷ್ಣ ದೇಗುಲ ಅಲ್ಲಿ ಇತ್ತೆನ್ನುವುದು ತಿಳಿಯುತ್ತದೆ. ಆಶ್ಚರ್ಯಕರವೆಂದರೆ ‘ಅನಂತಶಯನ ಮಹಾತ್ಮೆ’ ಗ್ರಂಥದಲ್ಲಿ ಶ್ರೀಕೃಷ್ಣ ದೇಗುಲದ ಉಲ್ಲೇಖವಿಲ್ಲ. 

‘ಭಾಗವತ ಪುರಾಣ’ ‘ಬ್ರಹ್ಮಾನಂದ ಪುರಾಣ’ ತಿಳಿಸುವ ಪ್ರಕಾರ ಬೃಹದಾಕಾರದ ಅನಂತ ಪದ್ಮನಾಭ ವಿಗ್ರಹ ಮತ್ತು ಮೂಲ ಗುಡಿ ಸಾವಿರಾರು ವರ್ಷ ಹಿಂದಿನದು. ನಮಾಳ್ವರ್ ಅವರ ವಿಷ್ಣು ಸ್ತುತಿ ರಚನೆಗಳ ಪ್ರಕಾರ ಮೂಲ ದೇಗುಲ ಕ್ರಿಸ್ತಶಕ 5ನೇ ಶತಮಾನಕ್ಕೂ ಮೊದಲೂ ಇತ್ತೆನ್ನುವುದು ತಿಳಿದು ಬರುತ್ತದೆ. ಇಲ್ಲಿ ಈಗಲೂ ಹತ್ತು ದಿನಗಳ ಆಚರಣೆಯ ‘ಅಲ್ಪಾಸಿ ಉಳ್ಸವಮ್’ 1375ನೇ ಇಸವಿಯಲ್ಲಿಯೂ ಆಚರಿಸಲ್ಪಡುತ್ತಿತ್ತು. 

ಕ್ರಿಸ್ತಶಕ 1459 ರಿಂದ 1460. 1461, ಮತ್ತು 1566ರಲ್ಲಿ ದೇಗುಲದ ಜೀರ್ಣೋದ್ಧಾರ ಕಾರ್ಯ ನಡೆದಿದೆ. 1686 ರಲ್ಲಿ ಸಂಭವಿಸಿದ ಭಾರಿ ಬೆಂಕಿ ಆಕಸ್ಮಿಕದಲ್ಲಿ ಮೂಲ ವಿಗ್ರಹ ಉಳಿದು ಮಿಕ್ಕೆಲ್ಲವೂ ಭಸ್ಮವಾಗಿದೆ. 1724ರಿಂದ ದೇಗುಲವನ್ನು ಪುನಃ ನಿರ್ಮಿಸುವ ಕಾರ್ಯ ಆರಂಭಗೊಂಡಿದೆ. 1729ರಲ್ಲಿ ಮಾರ್ತಾಂಡ ವರ್ಮ, ಟ್ರಾವೆಂಕೂರು ಸಂಸ್ಥಾನದ ದೊರೆಯಾಗುತ್ತಾರೆ. ಇವರ ಆಸಕ್ತಿಯಿಂದ ದೇಗುಲ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತದೆ. 1731ರ ವೇಳೆಗೆ ಅಪೂರ್ವ ವಾಸ್ತುಶಿಲ್ಪದ ಭವ್ಯ ದೇಗುಲ ನಿರ್ಮಾಣಗೊಳ್ಳುತ್ತದೆ. ಇದರ ಕಾರ್ಯದಲ್ಲಿ 4000 ಕಾರ್ಮಿಕರು, ಕುಶಲ ಶಿಲ್ಪಿಗಳು ಪಾಲ್ಗೊಂಡಿದ್ದರು ಎನ್ನುವುದು ತಿಳಿಯುತ್ತದೆ.

ರಾಜ ಮಾರ್ತಾಂಡ ವರ್ಮನ ಆಳ್ವಿಕೆ ಆರಂಭದ ಘಟ್ಟದವರೆಗೂ ಅನಂತ ಪದ್ಮನಾಭ ದೇಗುಲದ ಆಡಳಿತವನ್ನು 8 1/2 ಸದಸ್ಯರಿದ್ದ ‘ಎತ್ತರ ಯೋಗಂ’ ಸಮಿತಿ ನಿರ್ವಹಿಸುತ್ತಿತ್ತು. ನಂತರ ನಿಧಾನವಾಗಿ ಇದರ ನಿರ್ವಹಣಾ ಅಧಿಕಾರವನ್ನು ಮಾರ್ತಾಂತ ವರ್ಮ ತನ್ನ ಆಡಳಿತದ ಪರಿಧಿಗೆ ತೆಗೆದುಕೊಳ್ಳುತ್ತಾರೆ. 1750ರಲ್ಲಿ ಅತ್ಯಪೂರ್ವ ಘಟನೆ ಜರುಗುತ್ತದೆ. ರಾಜ ಮಾರ್ತಂತ ವರ್ಮ ತನ್ನ ರಾಜ್ಯಾಧಿಕಾರವನ್ನು ಮಹಾವಿಷ್ಣುವಿನ ಸನ್ನಿಧಿಗೆ ಸಮರ್ಪಿಸಿ ‘ಪದ್ಮನಾಭ ದಾಸ’ರಾಗುತ್ತಾರೆ, ನಂತರ ದೇವರ ಹೆಸರಿನಲ್ಲಿಯೇ ಆಳ್ವಿಕೆ ನಡೆಯುತ್ತದೆ.  ರಾಷ್ಟ್ರಕ್ಕೆ ಸ್ವಾತಂತ್ರ ಬಂದ ನಂತರ ಟ್ರಾವೆಂಕೂರು ದೇಗುಲಗಳ ನಿರ್ವಹಣಾ ಇಲಾಖೆ ರಚನೆಯಾಗುತ್ತದೆ. ಆದರೆ ತಿರು ಅನಂತ ಪದ್ಮನಾಭ ದೇಗುಲದ ಆಡಳಿತ ನಿರ್ವಹಣೆ ಟ್ರಾವೆಂಕೂರು ರಾಜಮನೆತನದದವರೇ ಮುಖ್ಯಸ್ಥರಾಗಿರುವ ಟ್ರಸ್ಟ್ ನೋಡಿಕೊಳ್ಳುತ್ತಿದೆ.

 ಅತ್ಯಪೂರ್ವ ವಾಸ್ತುಶಿಲ್ಪ ಹೊಂದಿರುವ ದೇಗುಲ ಮತ್ತು ಅದರ ಸಂಪತ್ತಿನ ನಿರ್ವಹಣೆ ಪಾರದರ್ಶಕವಾಗಿರಬೇಕು. ಲೆಕ್ಕ-ಪತ್ರಗಳು ಶುದ್ಧವಾಗಿರಬೇಕೆಂದು ಭಕ್ತರೊಬ್ಬರು ಕೇರಳ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಬಳಿಕ ಕೋರ್ಟ್ ದೇಗುಲದ ನಿರ್ವಹಣಾಧಿಕಾರ ರಾಜ್ಯ ಸರಕಾರಕ್ಕೆ ಸೇರಬೇಕೆಂದು ಆದೇಶ ನೀಡಿತು. ಇದನ್ನು ಟ್ರಾವೆಂಕೂರು ರಾಜಮನೆತನದ ಉತ್ತರಾಡಂ ತಿರುನಾಳ್ ಮಾರ್ತಂಡ ವರ್ಮ(ತೊಂಬತ್ತಕ್ಕೂ ಹೆಚ್ಚು ವಯಸ್ಸಿನ ವ್ಯಕ್ತಿ) ಸುಪ್ರೀಮ್ ಕೋರ್ಟಿನಲ್ಲಿ ಪ್ರಶ್ನಿಸಿದರು. ಅಲ್ಲಿ ಕೇರಳ ಹೈಕೋರ್ಟಿನ ತೀರ್ಪಿಗೆ ತಡೆಯಾಜ್ಞೆ ನೀಡಿದ ಕೋರ್ಟ್, ದೇಗುಲದ ಸಮಸ್ತ ಆಸ್ತಿಗಳ ಸಮೀಕ್ಷೆ-ದಾಖಲಾತಿಗೆ ಆದೇಶ ನೀಡಿತು. ಈ ಕಾರ್ಯ ನಿಭಾಯಿಸಲು ಕೇರಳ ಹೈಕೋರ್ಟ್ ನ್ಯಾಯಾಧೀಶರಿರುವ ಸಮಿತಿ ನೇಮಿಸಿತು. ಈ ಹಿನ್ನೆಲೆಯಲ್ಲಿ ದೇಗುಲದ ನೆಲ ಮಾಳಿಗೆಯಲ್ಲಿರುವ ಅನೇಕ ದಶಕಗಳಿಂದ ಬೀಗಮುದ್ರೆಗೆ ಒಳಗಾಗಿದ್ದ ಆರು ಕೊಠಡಿಗಳಲ್ಲಿ ಇದುವರೆಗೂ ಐದು ಕೊಠಡಿಗಳ ಬಾಗಿಲನ್ನು ತೆರೆದು ನೋಡಲಾಗಿದೆ.


ನೆಲಮಾಳಿಗೆಯ ವಿಶಾಲ-ವ್ಯವಸ್ಥಿತ-ಸುಭದ್ರ ಕೊಠಡಿಗಳಲ್ಲಿರುವ ಅಷ್ಟೈಶ್ವರ್ಯ ಕಂಡು ವೀಕ್ಷಣಾ ಸಮಿತಿ ದಿಗ್ಭ್ರಮೆಗೊಂಡಿದೆ. ಆ ಮಟ್ಟದ ಸಂಪತ್ತು ಇರಬಹುದೆಂಬ ಊಹೆಯನ್ನು ಬಹುಶಃ ರಾಜಮನೆತನದವರನ್ನು ಹೊರತು ಪಡಿಸಿ ಯಾರೂ ಮಾಡಿರಲಿಲ್ಲ. ಸಾವಿರಾರು ವರ್ಷಗಳ ಹಿಂದಿನಿಂದಲೂ ಸಂಗ್ರಹಣೆಯಾಗುತ್ತಾ ಬಂದ  ಹಿಂದಿನ ವಿಗ್ರಹಗಳು, ಚಿನ್ನ-ಮುತ್ತು-ಪಚ್ಚೆ-ವಜ್ರಗಳ ಆಭರಣಗಳು, ಕಿರೀಟಗಳು, ಚಿನ್ನದ ನಾಣ್ಯಗಳು, ಅನಂತ ಪದ್ಮನಾಭನ ಬಹು ಅಪರೂಪದ ಬೃಹತ್ ವಿಗ್ರಹ ಇಲ್ಲಿದೆ. ಇವೆಲ್ಲವೂ ಎಷ್ಟು ಪ್ರಮಾಣದಲ್ಲಿದೆ ಎಂದರೆ ನಿಖರವಾಗಿ ಲೆಕ್ಕ ತೆಗೆದುಕೊಳ್ಳಲು ಅನೇಕ ದಿನಗಳೇ ಬೇಕಾಗಬಹುದು. ಪ್ರತಿಯೊಂದು ಕೂಡ ಬೆಲೆ ಕಟ್ಟಲಾಗದ ಪ್ರಾಚೀನ ಕಲಾಕೃತಿಗಳು. ಇದುವರೆಗೆ ನೋಡಿದ ಸಂಪತ್ತಿನ ಅಂದಾಜು ಮೌಲ್ಯ 7,000 ಕೋಟಿ. ಆದರೆ ವಿವರವಾಗಿ ಪರಿಶೀಲಿಸಬೇಕಿರುವ ಕೊಠಡಿಗಳು ಇನ್ನೂ ಇವೆ. ಅಲ್ಲಿ ಇನ್ನೆಷ್ಟು ಸಂಪತ್ತಿದೆಯೋ….!

ಈ ಪ್ರಕ್ರಿಯೆ ಅದರ ಪಾಡಿಗೆ ಅದು ನಡೆಯುತ್ತದೆ. ಆದರೆ ಈ ಸಂಪತ್ತು ಯಾರಿಗೆ ಸೇರಬೇಕು. ಸಂಪತ್ತಿನ ಮೂಲ ಪ್ರಜೆಗಳು. ಅಂದರೆ ಇದು ಪ್ರಜಾ ಸರಕಾರಕ್ಕ ಸೇರಬೇಕೇ..? ಅಥವಾ ರಾಜಮನೆತನದ ಅಧೀನದಲ್ಲಿರುವ ಖಾಸಗಿ ಟ್ರಸ್ಟ್ ಸುಪರ್ದಿಯಲ್ಲಿಯೇ ಮುಂದುವರಿಯಬೇಕೆ..? ಇದರ ಬಗ್ಗೆ ಸುಪ್ರೀಮ್ ಕೋರ್ಟ್ ಇನ್ನೂ ಅಂತಿಮ ನಿರ್ಣಯ ನೀಡಬೇಕಿದೆ.

ಇವೆಲ್ಲ ಏನೇ ಇರಲಿ, ಅನಂತ ಪದ್ಮನಾಭ ದೇಗುಲ ವಿನ್ಯಾಸ-ರಚನೆ ಕಣ್ಮನ ಸೆಳೆಯುತ್ತದೆ. ನಾಸ್ತಿಕರಾದವರೂ ಇಲ್ಲಿಯ ಅನಂತ ಪದ್ಮನಾಭನ ಭವ್ಯತೆಗೆ ಕೈ ಮುಗಿಯುವ ಮನಸ್ಸಾಗದಿರದು. ಬೃಹತ್ತಾದ-ಸುಂದರವೂ ಆದ  ವಿಗ್ರಹದ ಮುಖದಲ್ಲಿರುವ ಮುಗ್ದತೆ ನಮ್ಮನ್ನು ಮರಳು ಮಾಡುತ್ತದೆ. ಈ ಇಡೀ ದೇಗುಲ ಒಂದು ಶಿಲ್ಪಕಲಾ ಕಾವ್ಯ. ಇವೆಲ್ಲದರಿಂದ ಮಾರು ಹೋಗಿರುವ ನಾನು, ಪ್ರತಿಸಲ ತಿರುವನಂತಪುರ ಮತ್ತು ಸನಿಹವೇ ಇರುವ ಕೋವಲಂಗೆ ಹೋದಾಗಲೆಲ್ಲ ದೇಗುಲಕ್ಕೆ ಭೇಟಿ ನೀಡುತ್ತೇನೆ. ಅಲ್ಲಿಯ ವಿಶಾಲವಾದ ಪ್ರಾಂಗಣದಲ್ಲಿ ಸುತ್ತ ಪ್ರದಕ್ಷಿಣೆ ಹಾಕಿ, ವಿಶಾಲವಾದ ಅನಂತನ ಮೇಲೆ(ಹಲವು ಹೆಡೆಗಳ ಹಾವು) ಪವಡಿಸಿರುವ ದಿವ್ಯ ಪದ್ಮನಾಭನಿಗೆ ವಿನಯದಿಂದ ಕೈ ಮುಗಿಯುತ್ತೇನೆ.

ಅಂದ ಹಾಗೆ ಇಷ್ಟೊಂದು ಭವ್ಯವಾದ ದೇಗುಲಕ್ಕೆ  ಮೇಲ್ಜಾತಿ ಜನರಿಗಷ್ಟೆ ಪ್ರವೇಶವಿತ್ತು. ನಾರಾಯಣ ಗುರು ಅಂಥ ಮಹಾತ್ಮರ ಅಂಜದ ಹೋರಾಟದಿಂದ ಎಲ್ಲ ಜಾತಿಗಳವರಿಗೂ 1936ರಿಂದ ಪ್ರವೇಶ ದೊರೆತಿದೆ. ಇಲ್ಲಿ ಈಗಲೂ ಉಳಿದಿರುವ ಸಂಪ್ರದಾಯವೆನೆಂದರೆ ಗಂಡಸರು ತಮ್ಮ ಮೇಲಂಗಿ ಕಳಚಿರಬೇಕು(ಬನಿಯನ್ ಕೂಡ), ಪಂಚೆ(ಲುಂಗಿ ಅಲ್ಲ) ಧರಿಸಿರಬೇಕು. ಸೆಲ್ವಾರ್ ಕಮೀಜ್, ಪ್ಯಾಂಟ್, ಚೂಡಿದಾರ್ ಧರಿಸಿದ ಮಹಿಳೆಯರಿಗೆ ಇಲ್ಲಿ ಪ್ರವೇಶವಿಲ್ಲ. ಸೀರೆ ಧರಿಸಿರಬೇಕು. ಸೆಲ್ವಾರ್ ಕಮೀಜ್ ಅಥವಾ ಚೂಡಿದಾರ್ ಧರಿಸಿದ ಮಹಿಳೆಯರು ಸೊಂಟದ ಕೆಳಗೆ ಪಂಚೆ ಸುತ್ತಿಕೊಂಡು ಒಳ ಪ್ರವೇಶಿಸಬಹುದು. ಸಣ್ಣ ಮಕ್ಕಳಿಗೂ ಇದರಿಂದ ವಿನಾಯತಿ ಇಲ್ಲ. ಯಾವುದೇ ಎಲೆಕ್ಟ್ರಾನಿಕ್ ಐಟಂ(ಕ್ಯಾಮೆರಾ, ಮೊಬೈಲ್ ಪೋನ್, ಲ್ಯಾಪ್ ಟಾಪ್ ಇತ್ಯಾದಿ)ಗಳನ್ನು ಒಳ ತೆಗೆದುಕೊಂಡು ಹೋಗುವಂತಿಲ್ಲ. ಪಂಚೆ ತೆಗೆದುಕೊಂಡು ಹೋಗಿರದಿದ್ದರೆ ಅಲ್ಲಿಯೇ ಹೊರಗೆ ಬಾಡಿಗೆಗೆ  ದೊರೆಯುತ್ತದೆ. ಇಷ್ಟಲ್ಲ ಕಷ್ಟಪಟ್ಟು ದರ್ಶನ ಮಾಡಬೇಕೆ ಎನ್ನುವವರಿಗೆ ನನ್ನ ಮಾತೆಂದರೆ, ಅಷ್ಟು ದೂರ ಹೋದಿರಾದರೆ ಆ ದೇಗುಲದ ಒಳ ಭವ್ಯತೆ ನೋಡುವುದರಿಂದ ವಂಚಿತರಾಗಬೇಡಿ.

ಮುಂದಿನ ಬಾರಿ ತಿರು ಅನಂತ ಪದ್ಮನಾಭ ದೇಗುಲಕ್ಕೆ ಹೊಂದಿಕೊಂಡಿರುವ ‘ಕುದುರೆ ಅರಮನೆ’(ರಾಜಮನೆತನದವರ ನಿವಾಸವಾಗಿತ್ತು). ಬಗ್ಗೆ ಬರೆಯುತ್ತೇನೆ. ಈ ಲೇಖನದ ಕುರಿತು ನಿಮಗೇನು ಅನಿಸಿತು…?  ನಿಮ್ಮ ಅಭಿಪ್ರಾಯ ತಿಳಿಸಲು ಕೋರಿಕೆ.

37 comments:

 1. ನಿಜಕ್ಕೊ ಒಳ್ಳೆಯ ಮಾಹಿತಿ....
  Thank you very much.. !

  ReplyDelete
 2. ಒಳ್ಳೆಯ ಮಾಹಿತಿ ಜೊತೆಗೆ ನಾವೂ ಸಹ ಈ ಸ್ಥಳವನ್ನು ನೋಡಲೇಬೇಕು ಎಂದೆನಿಸಿದೆ....... ತುಂಬಾ ಧನ್ಯವಾದಗಳು ಒಂದು ವಿಭಿನ್ನ ಮತ್ತು ಅದ್ಭುತ ಸಂಪದ್ಭರಿತ ಸ್ಥಳವನ್ನು ಪರಿಚಯಿಸಿದ್ದಕ್ಕೆ

  ReplyDelete
 3. heege baryuta iri. Channagidhe. :)

  ReplyDelete
 4. Tumba upayukta mahiti kottiddeera. Bharatavu eshtu sampadbharita deshavagittendu idarinda tiliyuttade. Mahitigagi dhanyavadagalu

  Shubha

  ReplyDelete
 5. ಒಳ್ಳೆ ಮಾಹಿತಿಗೆ ಧನ್ಯವಾದಗಳು....

  ReplyDelete
 6. ಸುಂದರ ದೇಗುಲದ ಬಗ್ಗೆ ಸುಂದರವಾಗಿ ವಿವರಿಸಿದ್ದೀರಿ... ಅದ್ಭುತ ದೇವಾಲಯ..ಭಾರತದ ಅತ್ಯಂತ ಹಳೆಯ ಹಾಗೂ ಅತ್ಯಂತ ಶ್ರೀಮಂತ ದೇಗುಲ.. ಭಕ್ತರಲ್ಲದವರೂ ಒಂದುಬಾರಿ ನೋಡಿಬರಬೇಕಾದ ಸ್ಥಳ..!! ವಿಶಾಲ ಆವರಣ,. ವಾಸ್ತುಶಿಲ್ಪ..ಗರ್ಭಗುಡಿಯಲ್ಲಿರುವ ವಿಷ್ಣುವನ್ನು ನೋಡಿದಷ್ಟೂ ಸಾಲದು !

  ReplyDelete
 7. FOR THE LAST 10 YEARS IN JAN I AM VISITING THIS TEMPLE.MY LAST VISIT WAS ON 13 TH JAN 2011.80-90% PEOPLE DONT KNOW ABT THIS TEMPLE..NOW IT IS IN NEWS WORLDWIDE.

  ReplyDelete
 8. nice informative article

  ReplyDelete
 9. ಒಳ್ಳೆಯ ಮಾಹಿತಿ ಜೊತೆಗೆ ನಾವೂ ಸಹ ಈ ಸ್ಥಳವನ್ನು ನೋಡಲೇಬೇಕು ಎಂದೆನಿಸಿದೆ....... ತುಂಬಾ ಧನ್ಯವಾದಗಳು.

  ReplyDelete
 10. ನಂತ ಪದ್ಮನಾಭನ ದಿವ್ಯ ರೂಪ ಜೊತೆಗೆ ಆ ದೇವಾಲಯದ ಭವ್ಯತೆ ಯನ್ನು ಎಲೆ ಎಳೆಯಾಗಿ ಬಿಡಿಸಿತ್ತಿದ್ದಿರಿ ನೆ ಅಲ್ಲಿ ನಿಂತು ನೋಡಿದ ಅನುಭವ ಆಯಿತು. ಧನ್ಯವಾದಗಳು.

  ReplyDelete
 11. ಬಹಳ ಚೆನ್ನಾಗಿದೆ ಬರಹ. ಓದಿದ ನ೦ತರ ದೇವಾಲಯವನ್ನು ಒಮ್ಮೆಯಾದರೂ ನೋಡಬೇಕೆ೦ದು ಅನಿಸುತ್ತಿದೆ.ಧನ್ಯವಾದಗಳು.

  ReplyDelete
 12. Another legend says that there is a connection between Anathapadmanabha temple situated in Ananthaura (a lake temple)of Kasaragod district and the Ananthashayana temple of Tiruvanthapuram.

  ReplyDelete
 13. Expressions of Cameroon ( Central Africa ) resident Sri. Ravi Murnad at ವಾಕ್ಪಥ Facebook Page :

  ಅತ್ತ್ಯುತ್ತಮ ಮಾಹಿತಿಯ ಲೇಖನ.ಇದುವರೆಗೆ ಎಲ್ಲಿ ಅಡಗಿ ಕುಳಿತಿತ್ತೋ?.ಬರಹದ ಲೇಖಕರು ಮಂಗಳೂರು ತುಳುನಾಡ ಸೀಮೆಗೆ, ಅದರಲ್ಲೂ "ಕಲೆಗಳ ಕಣಜ ಕರ್ನಾಟಕ" ದ ಅಗಾಧತೆಯನ್ನು "ದೇವರು ಮೆಟ್ಟಿದ ನೆಲ ಕೇರಳ" ದಿಂದ ಸಂಗ್ರಹಿಸಿ ಪರಿಚಯಿಸಿದ್ದು ಉತ್ತಮ ಮಾಹಿತಿಗಳಲ್ಲಿ ಒಂದು.ಧನ್ಯವಾದಗಳು.

  ReplyDelete
 14. ಕುಳಿತಲ್ಲಿಯೇ ಅನಂತ ಪದ್ಮನಾಭ ದೇವಾಲಯಕ್ಕೆ ಹೋದಂತಾಯಿತು. ತುಂಬಾ ಧನ್ಯವಾದಗಳು.

  ReplyDelete
 15. ತುಳುನಾಡಿನವರಿಂದ ಈ ದೇಗುಲ ಸ್ಥಾಪನೆಯಾಯಿತೆನ್ನುವುದು ಖಂಡಿತ ಹಿರಿಮೆ ಸಂಗತಿ. ಇಂಥ ಅಮೂಲ್ಯ ವಿಚಾರ ತಿಳಿಸಿದ ನಿಮಗೆ ಧನ್ಯವಾದ-Shivu Shivvu

  ReplyDelete
 16. wooow very informative kumar :) ishtella sampattidda karanakke parakeeyaru aakramanagalannu madi looti madutiddu bharatada devalayagala mele

  ReplyDelete
 17. Olleya lekhana....praachina degulada maahithi neediddira...matu uttamavaada nirupane.

  ReplyDelete
 18. ದೇವಾಲಯದ ಬಗ್ಗೆ ನೀವು ಕೊಟ್ಟಿರುವ ವರದಿ ಚನ್ನಾಗಿದೆ ಧನ್ಯವಾದಗಳು. ದೇವಾಲಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಚಿನ್ನ, ನಗ, ನಾಣ್ಯಗಳು ಸಿಕ್ಕಿರುವುದು ಸಂತೋಷದ ಸಂಗತಿ.
  ಅದು ಅಲ್ಲೇ ಇದ್ದು ಅವರಿವರ ಪಾಲಾಗದೆ ದೇಶದ ಅಬಿವೃದ್ಧಿಗೆ ಬಳಕೆಯಾಗುವುದು ಸೂಕ್ತ. ಏನಂತೀರಾ..?

  ReplyDelete
 19. Sarakaaaravu koodale yee aastiyannu raashtriya sampattendu ghoshisi muttugolu haakabeku.illadiddare adu kadeemara kallara jebige seri saai baba aastiyanthe kanda kanda vara vaahana galali patheyaagabahudu..Pramanika vyaktigalu nigaa vahisi yee aastiyannu muttugolu haakabeku..matthu sarakaaravu yee bagge lekka kodabeku..

  ReplyDelete
 20. Tumba chennada vivaraneyinda lekhana gamana seleyuttade. Naanu kooda ee devastaanakke hogi alliya bhavyate mattu ramyatege maaru hogidde. Ideega bhaari sampattu doretiddu adu dodda suddiyaagide. Innondu kotadiyalli enenu siguttade ennuva kutoohala ellarigoo. Nanoo idakke horatagilla! Nimma likhana prashamsege arhavaadaddu.

  ReplyDelete
 21. nice n informative , thanks for sharing.

  ReplyDelete
 22. ಒಳ್ಳೆ ಮಾಹಿತಿಗೆ ಧನ್ಯವಾದಗಳು....

  ReplyDelete
 23. Bheti madida 5 varshagala nantara, ithihasa tilidu santoshavayitu. nijakku dodda devastahna kadime endaru 3 gantegala kala a devsthanadalli odaiyadi bandevu. kelavu kade maralannu bekantale hakiddare adra vyshisthayavenu endu yaaru tilisi helailla,Tumba chennagide. Sampttina bagge matanadallre adannu rakshane maduvudu namma mattu naavu nambiruva sarkarada hone, rakshisidare visha manyateya patta sig bahudu. Ase burkaragadirali jana mattu sarkara.

  ReplyDelete
 24. Upayukta maahituyuLLa lEkhana. :) bhETi neeDabEkendiruva sthaLaLagaLa paTTiyalli innondu hesaru sErpaDeyaayitu. :)

  ReplyDelete
 25. ನಿರೂಪಣೆ, ವಿಷಯ ಎರಡೂ ಚೆನ್ನಾಗಿದೆ. ಈ ದೇವಸ್ಥಾನಕ್ಕೆ ಇರುವ ತುಳುವರ ಸಂಬಂಧ ಗೊತ್ತಿರಲಿಲ್ಲ. ಉತ್ತಮ ಮಾಹಿತಿಗಾಗಿ ಧನ್ಯವಾದ.

  ReplyDelete
 26. intresting can you please give few more information about this, please sir

  ReplyDelete
 27. ನಾವೆಂಥ ಪ್ರವಾಸಿಗರು ಅಂದರೆ ನವೆಂಬರ್ ನಲ್ಲಿ ಕೊವೆಲಂ ತನಕ ಹೋಗಿ ಈ ಪದ್ಮನಾಭ ದೇವಸ್ಥಾನ ನೋಡದೆ ಬಂದಿದ್ದೆವು. ಈಗ ಬೇಸರವಾಗುತ್ತಿದೆ. ನಿಮ್ಮ ಈ ಲೇಖನದಿಂದ ನನಗಂತೂ ತುಂಬಾನೇ ಸಂತೋಷವಾಗಿದೆ. ಅದರ ಬಗೆಗಿನ ವಿವರಣೆ ತುಂಬಾನೇ ಖುಷಿ ತಂತು..ಧನ್ಯವಾದಗಳು

  ReplyDelete
 28. ಒಳ್ಳೆಯ ಮಾಹಿತಿ ಜೊತೆಗೆ ನಾವೂ ಸಹ ಈ ಸ್ಥಳವನ್ನು ನೋಡಲೇಬೇಕು ಎಂದೆನಿಸಿದೆ....... ತುಂಬಾ ಧನ್ಯವಾದಗಳು ಒಂದು ವಿಭಿನ್ನ ಮತ್ತು ಅದ್ಭುತ ಸಂಪದ್ಭರಿತ ಸ್ಥಳವನ್ನು ಪರಿಚಯಿಸಿದ್ದಕ್ಕೆ

  ReplyDelete
 29. ಕುಳಿತಲ್ಲಿಯೇ ಅನಂತ ಪದ್ಮನಾಭ ದೇವಾಲಯಕ್ಕೆ ಹೋದಂತಾಯಿತು. ತುಂಬಾ ಧನ್ಯವಾದಗಳು.
  ಅತ್ತ್ಯುತ್ತಮ ಮಾಹಿತಿಯ ಲೇಖನ.ಇದುವರೆಗೆ ಎಲ್ಲಿ ಅಡಗಿ ಕುಳಿತಿತ್ತೋ?.ಬರಹದ ಲೇಖಕರು ಮಂಗಳೂರು ತುಳುನಾಡ ಸೀಮೆಗೆ, ಅದರಲ್ಲೂ "ಕಲೆಗಳ ಕಣಜ ಕರ್ನಾಟಕ" ದ ಅಗಾಧತೆಯನ್ನು "ದೇವರು ಮೆಟ್ಟಿದ ನೆಲ ಕೇರಳ" ದಿಂದ ಸಂಗ್ರಹಿಸಿ ಪರಿಚಯಿಸಿದ್ದು ಉತ್ತಮ ಮಾಹಿತಿಗಳಲ್ಲಿ ಒಂದು.ಧನ್ಯವಾದಗಳು.

  ReplyDelete
 30. ಳಿತಲ್ಲಿಯೇ ಅನಂತ ಪದ್ಮನಾಭ ದೇವಾಲಯಕ್ಕೆ ಹೋದಂತಾಯಿತು. ತುಂಬಾ ಧನ್ಯವಾದಗಳು.
  ಅತ್ತ್ಯುತ್ತಮ ಮಾಹಿತಿಯ ಲೇಖನ.ಇದುವರೆಗೆ ಎಲ್ಲಿ ಅಡಗಿ ಕುಳಿತಿತ್ತೋ?.ಬರಹದ ಲೇಖಕರು ಮಂಗಳೂರು ತುಳುನಾಡ ಸೀಮೆಗೆ, ಅದರಲ್ಲೂ "ಕಲೆಗಳ ಕಣಜ ಕರ್ನಾಟಕ" ದ ಅಗಾಧತೆಯನ್ನು "ದೇವರು ಮೆಟ್ಟಿದ ನೆಲ ಕೇರಳ" ದಿಂದ ಸಂಗ್ರಹಿಸಿ ಪರಿಚಯಿಸಿದ್ದು ಉತ್ತಮ ಮಾಹಿತಿಗಳಲ್ಲಿ ಒಂದು.ಧನ್ಯವಾದಗಳು.

  ReplyDelete
 31. ಳಿತಲ್ಲಿಯೇ ಅನಂತ ಪದ್ಮನಾಭ ದೇವಾಲಯಕ್ಕೆ ಹೋದಂತಾಯಿತು. ತುಂಬಾ ಧನ್ಯವಾದಗಳು.
  ಅತ್ತ್ಯುತ್ತಮ ಮಾಹಿತಿಯ ಲೇಖನ.ಇದುವರೆಗೆ ಎಲ್ಲಿ ಅಡಗಿ ಕುಳಿತಿತ್ತೋ?.ಬರಹದ ಲೇಖಕರು ಮಂಗಳೂರು ತುಳುನಾಡ ಸೀಮೆಗೆ, ಅದರಲ್ಲೂ "ಕಲೆಗಳ ಕಣಜ ಕರ್ನಾಟಕ" ದ ಅಗಾಧತೆಯನ್ನು "ದೇವರು ಮೆಟ್ಟಿದ ನೆಲ ಕೇರಳ" ದಿಂದ ಸಂಗ್ರಹಿಸಿ ಪರಿಚಯಿಸಿದ್ದು ಉತ್ತಮ ಮಾಹಿತಿಗಳಲ್ಲಿ ಒಂದು.ಧನ್ಯವಾದಗಳು.

  ReplyDelete
 32. ettaram samitiyiya sadasyara saMkhye 81/2 annuvadEnu? dayavittu vivarisiri.

  ReplyDelete
 33. dhanyavadagalu. neevu bahala chennagi kshethrakarya mattu adhyayana madi bariyuttiddeeri.-naresh mulleria

  ReplyDelete
 34. nivu lekanavannu baredu maheti kottadakke dhanyavadagalu.

  Alliruva sampattu hindu dharmakaryakke upayogavagali endu prarthane.

  ReplyDelete
 35. tumba danyavaadagalu aadare idu yaava isaviyadu endu tilisilla?

  ReplyDelete