• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ವಾಸ್ತವವಾದಿ ಚಿಂತಕ ಆನಂದ್ ತೇಲ್ತುಂಬ್ಡೆ'ಹಿಂದೂ ಸಂಸ್ಕೃತಿಯು ವಸುದೈವ ಕುಟುಂಬಕಂ (ಇಡೀ ವಿಶ್ವವೇ ಒಂದು ಕುಟುಂಬವಿದ್ದಂತೆ) ಎಂಬ ಮಂತ್ರವನ್ನು ಜಪಿಸುತ್ತಲೇ ಸಮಾಜವನ್ನು ಸಾವಿರಾರು ಜಾತಿಗಳಾಗಿ ಛಿದ್ರಛಿದ್ರಗೊಳಿಸಿದೆ. ಅಹಿಂಸೆಯೇ ಪರಮ ಮೌಲ್ಯವೆಂದು (ಅಹಿಂಸೋ ಪರಮ ಧರ್ಮಃ) ಪ್ರತಿಪಾದಿಸುತ್ತಲೇ ಹಿಂದೂ ಸಂಸ್ಕೃತಿಯು ಆಯುಧಪಾಣಿ ದೇವರುಗಳನ್ನು ಪೂಜಿಸುತ್ತಾ ನಿತ್ಯದ ಜೀವನದಲ್ಲಿ ಅನಿಯಂತ್ರಿತ ಹಿಂಸೆಯನ್ನು ಸಮರ್ಥಿಸಿಕೊಳ್ಳುತ್ತದೆ' ಇದು ತಾವೇ ಬರೆದ 'ಖೈರ್ಲಾಂಜಿ'( ಕನ್ನಡ ಅನುವಾದ;ಶಿವಸುಂದರ್ ಮತ್ತು ಗೆಳೆಯರು) ಪುಸ್ತಕದ ಆರಂಭದಲ್ಲಿ ಆನಂದ ತೇಲ್ ತುಂಬ್ಡೆ ಅವರು ಹೇಳಿದ ಕಟುಸತ್ಯ. ಭಾರತದಲ್ಲಿ ದಲಿತರ ಸ್ಥಿತಿಯನ್ನು ಮಹಾರಾಷ್ಟ್ರದ ಖೈರ್ಲಾಂಜಿ ದಲಿತ ಕಗ್ಗೊಲೆಗಳ ಕುರಿತ ಬರಹದ ಮೂಲಕ ಸವಿಸ್ತಾರವಾಗಿ ತೆರೆದಿಡುವ ಕಾರ್ಯವನ್ನು ಇವರು ಮಾಡಿದ್ದಾರೆ

ನವಭಾರತದ ಬೆಳವಣಿಗೆಗಳ ಹಿಂದಿನ ಮರ್ಮವನ್ನು  ಆನಂದ್ ತೇಲ್ ತುಂಬ್ಡೆ ಪದರ ಪದರವಾಗಿ ತೆರೆದಿಡುತ್ತಾರೆ. ಇಂಥ ಪ್ರಖರ ಚಿಂತಕರ ಮಾತುಗಳನ್ನು ನೇರವಾಗಿ ಕೇಳುವ ಅವಕಾಶ ಇಂದು(ಏಪ್ರಿಲ್ ೧೫, ೨೦೧೧) ದೊರಕಿತು. 'ಮಾರುಕಟ್ಟೆ ಬಂಡವಾಳವಾದ ಮತ್ತು ಅಂಬೇಡ್ಕರ್ ಸಮಾಜವಾದ' ಕುರಿತು ಇವರು ಮಾತನಾಡಿದರು. ಈ ಕಿರುಸಭೆಯನ್ನು ಗೌರಿ ಲಂಕೇಶ್ ಪತ್ರಿಕಾ ಬಳಗದವರು ಆಯೋಜಿಸಿತ್ತು. ಭಾರತದೊಳಗೆ ನವ ಉದಾರವಾದ ಕಳ್ಳಹೆಜ್ಜೆಗಳನಿಟ್ಟು 37 ವರ್ಷಗಾಗಿದೆ. ಇದು ಬೃಹದಾಕಾರವಾಗಿ ಬೆಳೆಯುತ್ತಾ ಹುಸಿ ಅಭಿವೃದ್ಧಿ ಭ್ರಮೆಗಳನ್ನು ಉಂಟು ಮಾಡುತ್ತಲೇಯಿದೆ ಎನ್ನುತ್ತಾ ಮಾರುಕಟ್ಟೆ ಬಂಡವಾಳದ ಮರ್ಮಗಳನ್ನು ಬಿಡಿಸಿಟ್ಟರು. ವಾಸ್ತವ ಪ್ರಗತಿ ಚಿಂತನೆ ಹೊಂದಿದ ಅಂಬೇಡ್ಕರ್ ಅವರ ಚಿಂತನೆ-ಯೋಜನೆಗಳಲ್ಲಿ ಪ್ರಖರ ಸಮಾಜವಾದಿ ಸಿದ್ಧಾಂತದ ಪ್ರಭಾವವಿತ್ತು. ಭಾರತದ ಮೊದಲ ಸಮಾಜವಾದಿ ಚಿಂತಕರೆಂದರೆ ಅಂಬೇಡ್ಕರ್. ಸಮಾಜವಾದಿ ಕ್ರಾಂತಿ ನಂತರ ಅದರ ಹರಿಕಾರರು ಮಾತ್ರವೇ ರಚಿಸಬಹುದಾದ ಸಿದ್ಧಾಂತ-ತತ್ವಗಳನ್ನು ಅವರ ಅಧ್ಯಕ್ಷತೆಯಲ್ಲಿ ರಚಿತವಾದ ಕರಡು ಸಂವಿಧಾನ ಹೊಂದಿತ್ತು. ಅಂಬೇಡ್ಕರ್ ಅವರ ಸಮಾಜವಾದಿ ಚಿಂತನೆಗಳನ್ನು ಇಂದಿಗೂ ಬಹುಸಂಖ್ಯಾತರು ಗ್ರಹಿಸಿಲ್ಲ ಎಂಬ ವಿಷಾದವೂ ಅವರದಾಗಿತ್ತು.

No comments:

Post a Comment