• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಫೃಥ್ವಿ:ಬಳ್ಳಾರಿ ಬದುಕಿನ ನೈಜ ಚಿತ್ರಣ

ಧೂಳು....ಧೂಳೋ ಧೂಳು.ಇದು ಬಳ್ಳಾರಿಗೆ ಕಾಲಿಟ್ಟವರೆಲ್ಲ ಹೇಳುವ ಮಾತು.ಇದಕ್ಕೆ ಕಾರಣ ಬಳ್ಳಾರಿ ನಗರದ ಸುತ್ತಲೂ ಅವ್ಯಾಹತವಾಗಿ ನಡೆಯುತ್ತಿರುವ ಅದಿರು ಗಣಿಗಾರಿಕೆ.ಬಳ್ಳಾರಿ ನಗರದ ಸುತ್ತಮುತ್ತಲಲ್ಲದೇ ಈ ಜಿಲ್ಲೆಯ ಇನ್ನು ಕೆಲವಾರು ತಾಲೂಕುಗಳಲ್ಲಿ ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ.ಆದರೆ ಇವೆಲ್ಲ ಗಣಿಗಾರಿಕೆಯಲ್ಲಿ ಬಹುತೇಕ ಅಕ್ರಮ.ಇಂಥ ದಂಧೆ,ಸಾಮಾನ್ಯ ಬಳ್ಳಾರಿಗರ ಬದುಕನ್ನ ಹಿಂಡಿ ಹಿಪ್ಪೆ ಮಾಡುತ್ತಿದೆ.ಅಕ್ರಮ ಗಣಿಗಾರಿಕೆಯಿಂದಾಗಿ ಅಪರಾಧಗಳ ಸಂಖ್ಯೆ ಹೆಚ್ಚುತ್ತಲೇಯಿದೆ.ಪ್ರಾಮಾಣಿಕರಿಗೆ ಉಳಿಗಾಲವೇ ಇಲ್ಲ.ಬದುಕನ್ನು ಭ್ರಷ್ಟಗೊಳಿಸುತ್ತಿರುವ ಅಕ್ರಮ ಗಣಿಗಾರಿಕೆಯಿಂದಾಗಿ ಅನಾಹುತಗಳ ಸರಮಾಲೆಯೇ ಘಟಿಸುತ್ತಿದೆ.ಇದನ್ನೆಲ್ಲ ಸರಿ ಮಾಡಬೇಕಾದ ಸರಕಾರಗಳು ದಿವ್ಯ ಮೌನ ತಳೆದಿವೆ.ಇದಕ್ಕೆ ಕಾರಣ ಸ್ವಷ್ಟ. ಬಳ್ಳಾರಿಯ ನೈಸರ್ಗಿಕ ಸಂಪತ್ತಿನಿಂದ ಬೆರಳೆಣಿಕೆಯಷ್ಟು ಮಂದಿಯ ಖಜಾನೆ ಹಿಗ್ಗುತ್ತಲೇ ಇದೆ.ಅಲ್ಲಿನ ಸಾಮಾನ್ಯರ ಸುಖ-ಸಂತೋಷಗಳನ್ನು ಅಕ್ರಮ ಗಣಿಗಾರಿಕೆ ಆಫೋಶನ ತೆಗೆದುಕೊಂಡಿದೆ.ಇವೆಲ್ಲವನ್ನು 'ಫ್ರಥ್ವಿ' ಸಿನಿಮಾ ಚೆನ್ನಾಗಿ ಹಿಡಿದಿಟ್ಟಿದೆ.ಬಿಗಿಯಾದ ಚಿತ್ರಕಥೆ ಮತ್ತು ನಿರೂಪಣೆ.ಇಂಥ ಕ್ಲಿಷ್ಟ ವಸ್ತುವನ್ನು ಬೋರ್ ಹೊಡೆಸದಂತೆ ಜನರ ಮುಂದಿಡುವುದರಲ್ಲಿ ನಿರ್ದೇಶಕ ಜೇಕಬ್ ವರ್ಗಿಸ್ ಗೆದ್ದಿದ್ದಾರೆ. ಪ್ರಾಮಾಣಿಕ ಜಿಲ್ಲಾಧಿಕಾರಿ ಪಾತ್ರಕ್ಕೆ ಪುನೀತ್ ಜೀವ ತುಂಬಿದ್ದಾರೆ.ಜಿಲ್ಲಾಧಿಕಾರಿ ಪತ್ತ್ನಿಯಾಗಿ ನಟಿಸಿರುವ ಪಾರ್ವತಿ ಮೆನನ್ ಕಣ್ಣುಗಳಲ್ಲಿಯೇ ಭಾವನೆ ತುಳುಕಿಸುತ್ತಾರೆ.ಬಳ್ಳಾರಿಯಲ್ಲಿ ನಡೆಯುತ್ತಿರುವ ಅನ್ಯಾಯಗಳನ್ನ ಕನ್ನಡಿಗರಿಗೆ ಚೆನ್ನಾಗಿ ಪರಿಚಯಿಸುವ ಕಾರ್ಯವನ್ನ ಫ್ರಥ್ವಿ ಸಿನಿಮಾ ಮಾಡಿದೆ

No comments:

Post a Comment