• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಹಲ್ಲೆ ನಂತರವೂ ಮುಂದುವರಿದ ತಲ್ಲಣ....ಆತಂಕ

ಅಕ್ರಮ ಗಣಿಗಾರಿಕೆ ಕುರಿತ ನಿರಂತರ ವರದಿಗಳ ನಂತರ ತೀವ್ರ ಹಲ್ಲೆಗೊಳಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ಬೆಡ್ ನಲ್ಲಿದೆ.ಸರಣಿಯೋಪಾದಿಯಲ್ಲಿ ಒಬ್ಬರ ನಂತ್ರ ಒಬ್ಬರು ವೈದ್ಯರು ಬರ್ತಿದ್ರು.ಗಮನವಿಟ್ಟು ಪರೀಕ್ಷೆ ಮಾಡ್ತಿದ್ರು.ಹೊಟ್ಟೆ ಮೇಲೆ ಬಲವಾದ ಏಟುಗಳು ಬಿದ್ದು ಚರ್ಮ ಸುಲಿದುಹೋಗಿ ರಕ್ತ ಒಸರುತ್ತಿತ್ತು.ಏಟುಗಳಿಂದ ತಲೆ ಮತ್ತು ಹೊಟ್ಟೆ ಭಾರಿ ಊದಿಕೊಂಡಿತ್ತು. ತಲೆ ದಿಮಿಗುಡುತ್ತಲೇ ಇತ್ತು.ಹಿರಿಯ ವೈದ್ಯರೊಬ್ರು ತಲೆಗೆ ವಿಟಿ ಸ್ಕ್ಯಾನ್ ಆಗ್ಬೇಕು ಅಂದ್ರು.ಮತ್ತೋರ್ವ ಹಿರಿಯ ವ್ಯೆದ್ಯರು ಹೊಟ್ಟೆ,ಕುತ್ತಿಗೆ,ಬೆನ್ನುಗಳ ಎಕ್ಸರೆ ತೆಗೆಯಬೇಕು ಅಂದ್ರು...... ನನಗೆ ಆತಂಕ ಹೆಚ್ಚಾಯಿತು.ವಿಟಿ ಸ್ಕ್ಯಾನ್,ಎಕ್ಸರೇಗಳಿಂದ ದೇಹದ ಮೇಲೆ ರೇಡಿಯೇಷನ್ ದುಷ್ಪರಿಣಾಮ ಆಗೋದಿಲ್ಲವೇ ಅಂತ.ವೈದ್ಯರ ಬಳಿ ನನ್ನ ಆತಂಕ ತೋಡಿಕೊಂಡೆ.ಏನೂ ಆಗೋದಿಲ್ಲ ಕಣ್ರೀ ಅಂದ್ರು.ನನ್ನ ಆತಂಕ,ತಲ್ಲಣ ಕಡಿಮೆಯಾಗಲಿಲ್ಲ.ಆದ್ರೆ ವಿಟಿ ಸ್ಕ್ಯಾನ್,ಎಕ್ಸರೇ ಅನಿವಾರ್ಯ ಅಂದ್ರು ವ್ಯೆದ್ಯರು.ವಿಧಿಯಿಲ್ಲದೇ ಎಕ್ಸರೇ ರೂಮಿಗೆ ಹೋದೆ.ನಂತ್ರ ವಿಟಿ ಸ್ಕ್ಯಾನ್ ಗೆ.ಇಷ್ಟೋತ್ತಿಗಾಗಲೇ ನಾಲ್ಕ್ಯೆದು ಇಂಜೆಕ್ಷನ್ಗಳಾಗಿದ್ವು. ಮತ್ತೆ ಕಡಲೇಕಾಳು ಗಾತ್ರದ ಮಾತ್ರೆಗಳ ಸೇವನೆ.ಹೊಟ್ಟೆ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿತ್ತು.ಹೊಕ್ಕಳ ಬಳಿ ಸವರಿದರೆ ಗಂಟು-ಗಂಟು.ಇವೆಲ್ಲದರ ಜೊತೆಗೆ ರೇಡಿಯೇಷನ್ ನಿಂದ ದುಷ್ಪರಿಣಾಮವಾದ್ರೆ ಎನ್ನೋ ಆತಂಕ....ಆಸ್ಪತ್ರೆಯಿಂದ ಬಂದ ಎರಡು ದಿನ ಕಳೆದ್ರು ನೆಟ್ಟಗೆ ನಡೆಯಲೂ ಆಗದ,ಮೆಟ್ಟಿಲಿಳಿಯಲೂ ಆಗದ ಸ್ಥಿತಿ.ನಡೆದರೆ,ಮೆಟ್ಟಿಲಿಳಿದರೆ ಅಥವಾ ಹತ್ತಿದ್ರೆ ಹೊಟ್ಟೆಯಲ್ಲಿ ಭಾರಿ ನೋವು.ಕುಳಿತು ಮಲ ವಿಸರ್ಜನೆ ಮಾಡಲು ಬಾಧೆ ಪಡಬೇಕಾದ ಸ್ಥಿತಿ.ಇವೆಲ್ಲ ನರಕ ಯಾತನೆ.....

No comments:

Post a Comment