• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಟಾರ್ಗೆಟ್ ಹಲ್ಲೆ

ಮಾರ್ಚ್ 29,ಬೆಳಿಗ್ಗೆ 7.45ಕ್ಕೆ ನಾನು ಮತ್ತು ಕ್ಯಾಮರಾಮನ್ ,ಬಳ್ಳಾರಿ ಸಿಟಿಯಲ್ಲಿರೋ ಬಾಲಾ ರಿಜೆನ್ನಿ ಹೋಟೆಲಿನಲ್ಲಿದ್ದೆವು.ಸರ್ವೇ ಆಫ್ ಇಂಡಿಯಾ ಅಧಿಕಾರಿಗಳು ಕೇಳಿರುವ ಬಳ್ಳಾರಿ ಕಾಯ್ದಿಟ್ಟ ಅರಣ್ಯಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ನೀಡಲು ಹಿರಿಯ ಅರಣ್ಯಾಧಿಕಾರಿಗಳು ಬರ್ತಾರೆಯೆಂದು ಹಿಂದಿನ ದಿನ ಸಂಜೆ ಗೊತ್ತಾಗಿತ್ತು.ನಾವು ಹೋದ ತುಸು ಹೊತ್ತಿಗೆ ಇತರೇ ಮಾಧ್ಯಮಗಳ ಪ್ರತಿನಿಧಿಗಳು ಬಂದು ಸೇರತೊಡಗಿದರು.ಬಳ್ಳಾರಿ ವಿಭಾಗದ ಮತ್ತು ಆಂಧ್ರದ ಅನಂತಪುರ ವಿಭಾಗದ ಅರಣ್ಯಾಧಿಕಾರಿಗಳು ಸಭಾಂಗಣಕ್ಕೆ ಬರುವ ದೃಶ್ಯಗಳನ್ನು ಚಿತ್ರೀಕರಿಸಲು ತಿಳಿಸಿದೆ.

ಮೀಟಿಂಗ್ ಸುರುವಾಯಿತು.ತಮ್ಮ ಕಚೇರಿಗಳಿಗೂ ಬಾಲಾ ಹೋಟೆಲಿಗೂ ಅರಣ್ಯ ಇಲಾಖೆ ಸಿಬ್ಬಂದಿ ಓಡಾಟ ಹೆಚ್ಚಾಯ್ತು.ಅರಣ್ಯದ ಅಟ್ಲಾಸ್,ಮ್ಯಾಪ್,ಟೋಫೋ ಷೀಟ್ಗಳನ್ನು ತರತೊಡಗಿದ್ರು.ಸಭೆಗೆ ಪತ್ರಕರ್ತರ ಪ್ರವೇಶ ನಿರ್ಭಂದಿಸಲಾಗಿತ್ತು.ಆದ್ರೆ ಸಭಾಂಗಣದ ಸ್ಕ್ರೀನ್ ತುಸು ಓಪನ್ ಆಗಿತ್ತು.ಇದ್ರ ಮೂಲಕ ವಿಷ್ಯುವಲ್ಸ್ ತೆಗೆದುಕೊಳ್ಳುವಂತೆ ತಿಳಿಸಿದೆ.ಪ್ರಗತಿಯಲ್ಲಿದ್ದ ಮೀಟಿಂಗ್ ವಿವರಗಳನ್ನು ಸಂಗ್ರಹಿಸಿದೆ.
ಸ್ಥಳದಿಂದ್ಲೇ ಲ್ಯಾಪ್ ಟಾಪ್ ಮುಖಾಂತರ ಈ ಎಲ್ಲ ಪ್ರಕ್ರಿಯೆಯ ವಿಷ್ಯುವಲ್ಸ್ ಮತ್ತು ವರದಿ ಕಳುಹಿಸಿದೆ.

ನಂತ್ರ ಕೆಳಗೆ ಬಂದೆ.ಇತರ ಮಾಧ್ಯಮ ಪ್ರತಿನಿಧಿಗಳು ಬಂದ್ರು.ಬಳ್ಳಾರಿಯ ಬಿ.ಎಸ್.ಎನ್.ಎಲ್.ಕಚೇರಿಯಲ್ಲಿ ತ್ರೀ ಜಿ.ಉದ್ಘಾಟನೆಯಿತ್ತು.ಕೆಲವು ಪತ್ರಕರ್ತರು ಅಲ್ಲಿಗೆ ಹೋದ್ರು.ಬಳ್ಳಾರಿ ವಿಭಾಗದ ಅರಣ್ಯಾಧಿಕಾರಿಗಳು ಹೊರಗಡೆ ಬಂದ್ರೆ ಅವರ ಪ್ರತಿಕ್ರಿಯೆ ಪಡೆಯಬೇಕೆಂಬ ಉದ್ದೇಶದಿಂದ ನಾನು ಹೋಗಲಿಲ್ಲ.ಇದೇ ಉದ್ದೇಶದಿಂದ ಇನ್ನೂ ಮೂವರು ಪತ್ರಕರ್ತರು ಅಲ್ಲೇ ಉಳಿದುಕೊಂಡ್ರು.ಸ್ಯಾಟ್ ಲೈಟ್ ಮುಖಾಂತರ ನಡೆಯೋ ಈ ಗಣಿ-ಗಡಿ ಸರ್ವೇ ಬಗ್ಗೆ ನಮ್ಮಲಿಯೇ ಚರ್ಚೇ ಆರಂಭವಾಯ್ತು.

ಸಮಯ ಹನ್ನೊಂದಾಗಿತ್ತು.ಚಹಾ ಕುಡಿದು ಬರೋಣವೆಂದು ಡೆಕ್ಕನ್ ಕ್ರಾನಿಕಲ್ ರಿಫೋರ್ಟರ್ ಹೇಳಿದ್ರು.ಅಲ್ಲೇ ಸನಿಹದಲ್ಲಿರುವ ಸಾಧನ ಬೇಕರಿಗೆ ಹೋದೆವು.ಜೊತೆಯಲ್ಲಿ ಟಿವಿ 9 ರಿಫೋರ್ಟರ್,ಕಸ್ತೂರಿ ಟಿವಿ ರಿಫೋರ್ಟರ್,ಟಪಾಲ್ ಗಣೇಶ್,ಏಕಾಂಬರಂ,ಚಂದ್ರಶೇಖರ್ ಮತ್ತು ಗಣೇಶ್ ಅಳಿಯ ವಿನೋದ್ ಇದ್ರು.ಚಹಾ ಕುಡಿದ್ವು.ಸಿಗರೇಟ್ ಸೇದೋರು ಸೇದ್ತಾಯಿದ್ರು.ನಾನು ಬೆಂಚ್ ಮೇಲೆ ಕುಳಿತಿದೆ.ನನ್ನ ಪಕ್ಕದಲ್ಲಿ ರಸ್ತೆ ಕಡೆಗೆ ಕಸ್ತೂರಿ ಟಿವಿ ರಿಫೋರ್ಟರ್ ಕುಳಿತಿದ್ರು.ಇವ್ರ ಮುಂದೆ ಟಿವಿ9 ರಿಫೋರ್ಟರ್ ನಿಂತಿದ್ರು.ಟಪಾಲ್ ಗಣೇಶ್ ಬೇಕರಿಯ ಕಾರ್ನರ್ ನಲ್ಲಿ ನಿಂತಿದ್ರು ಆಗ.....

ಬೇಕರಿ ಮುಂದೆ ದಢನೇ ನಿಂತ ಕಾರಿನಿಂದ ಸಡನ್ನಾಗಿ ಇಳಿದುಬಂದವ್ರು ಬೇಸ್ ಬಾಲ್ ಬ್ಯಾಟುಗಳಿಂದ ನನಗೆ ಹೊಡೆಯೋದಕ್ಕೆ ಸುರು ಮಾಡಿದ್ರು.ಬೆನ್ನು,ಕೈಕಾಲು,ಹೊಟ್ಟೆಗೆ ಬಲವಾದ ಪೆಟ್ಟುಗಳು ಬಿದ್ದವು.ಅಲ್ಲಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿದ್ದಾಗ ಸಡ್ಡನ್ನಾಗಿ ಕಾರಿನಿಂದ ಇಳಿದ ಮತ್ತೋರ್ವ ದಾಂಢಿಗ ನನ್ನ ತಲೆಗೆ ಗುರಿಯಿಟ್ಟು ಬೇಸ್ ಬಾಲ್ ಬ್ಯಾಟ್ ಬೀಸಿದ.ಇದರಿಂದ ತಪ್ಪಿಸಿಕೊಳ್ಳಲು ತಲೆ ತಗ್ಗಿಸಿದೆ.ಆದ್ರೆ ತಲೆ ಮೇಲ್ಬಾಗಕ್ಕೆ ದಬ್ಬನೇ ಏಟು ಬಿತ್ತು.ಅಲ್ಲಿಂದ ಸುಮಾರು ಇನ್ನೂರು ಅಡಿಗಳಿಷ್ಟಿರುವ ಬಾಲಾ ಹೋಟೆಲಿಗೆ ಓಡಿಬಂದೆ.ಆಯಾಸವಾಗಿತ್ತು.ಕ್ಯಾಮರಾಮನ್ ಗಳನ್ನ ಸ್ಪಾಟಿಗೆ ಹೋಗುವಂತೆ ಸೂಚಿಸಿದೆ.ದಿಮ್ಮಿದಿಮ್ಮಿ ಎನ್ನುತ್ತಿದ್ದ ತಲೆ ಮುಟ್ಟಿದೆ.ಭಾರಿ ಊದಿಕೊಂಡಿತ್ತು.ಹೊಟ್ಟೆಯೂ ಊದಿಕೊಂಡು ರಕ್ತ ಒಸರತೊಡಗಿತ್ತು.

ವಾಪಸ್ಸು ಬಂದ ಕ್ಯಾಮರಾಮನ್ ಗಳು ಗಣೇಶ್ ಗೆ ಭಾರಿ ಏಟು ಬಿದ್ದಿದೆ.ನಾವು ಹೋಗುವಷ್ಟರಲ್ಲಿ ದುಷ್ಕರ್ಮಿಗಳು ಪರಾರಿಯಾಗಿದ್ರು ಅಂದ್ರು.ನನಗೆ ಬಿದ್ದ ಏಟುಗಳನ್ನು ಚಿತ್ರೀಕರಿಸಿದ್ರು.ಟೈಮ್ಸ್ ಆಫ್ ಇಂಡಿಯಾದ ರಿಫೋರ್ಟರ್ ನನನ್ನು ವಿಮ್ಸ್ ಆಸ್ಪತ್ರಗೆ ಕರೆದುಕೊಂಡು ಹೋದ್ರು.ಅಷ್ಟರಲ್ಲಾಗಲೇ ಗಣೇಶ್ ಮತ್ತು ಇವ್ರ ಅಳಿಯ ವಿನೋದ್ ದಾಖಲಾಗಿದ್ರು.ನಮಗೆಲ್ಲ ತುರ್ತು ಚಿಕಿತ್ಸೆ ನೀಡಿದ್ರು.ನನ್ನ ಮೊಬೈಲ್ ಗೆ ಪುರುಸೋತ್ತೇ ಇರಲಿಲ್ಲ.ದಿಮಿಗುಡುತ್ತಾ ನೋಯುತ್ತಿದ್ದ ತಲೆ,ಹೊಟೆನೋವಿನ ನಡುವೆ ಬರುವ ಕಾಲ್ ಗಳನ್ನ ಅಟೆಂಡ್ ಮಾಡಿದೆ.ಸ್ಪಲ್ಪ ಹೊತ್ತಿನ ನಂತ್ರ ಸಾಧ್ಯವಿಲ್ಲ ಅನಿಸ್ತು.ನಿದ್ದೆ ಮಾಡಲು ಯತ್ನಿಸಿದೆ.ಸಾಧ್ಯವಾಗಲಿಲ್ಲ.ಆಗ ನಡೆದ ದುರ್ಘಟನೆ ವಿವರದ ಸುರುಳಿಗಳು ಬಿಚ್ಚಿಕೊಂಡವು.ಬಂದ ದುಷ್ಕರ್ಮಿಗಳು ಅಪ್ಪಿತಪ್ಪಿಯೂ ಬೇರೆ ಯಾರಿಗೂ ಹೊಡೆದಿರಲಿಲ್ಲ. ಹೊಡೆದಿರಲಿಲ್ಲ.ನನಗೆ ಅಡ್ಡವಾಗಿ ಇನಿಬ್ರು ಪತ್ರಕರ್ತರು ಇದ್ರೂ ಅವರಿಗೆ ಏಟುಗಳು ಬೀಳಲಿಲ್ಲ.ಅವರಿಗೆ ಏಟು ಬೀಳಬೇಕಿತ್ತು ಎಂಬ ಉದ್ದೇಶ ನನದಲ್ಲ.ಗಣೇಶ್ ಗೆ ಮಾತ್ರ ಹೊಡೆಯಬೇಕೆಂಬ ಉದ್ದೇಶವಿದ್ರೆ ಸೀದಾ ಅವರ ಬಳಿಗೆ ಹೋಗ್ತಿದ್ರು.ಆದ್ರೆ ಮೊದಲು ನನಗೇ ಹೊಡೆದಿದ್ದು ಏಕೆ.ನಾನು ಕೂಡ ಅವರ ಟಾರ್ಗೇಟ್ ಆಗಿದ್ನ?
ಅಲ್ಲಿಯ ಸನ್ನಿವೇಶವನ್ನ ನೋಡಿದ್ರೆ ಇದು ಖಚಿತ ಅನಿಸ್ತು.ಅಕ್ರಮ ಗಣಿಗಾರಿಕೆ ಬಗ್ಗೆ ನಾನು ಸಾಕಷ್ಟು ರಿಫೋರ್ಟ್ ಮಾಡಿದ್ದೇ ಇದಕ್ಕೆ ಕಾರಣ

No comments:

Post a Comment